Saturday, June 6, 2026
Homeಕರಾವಳಿಉಡುಪಿಕಟಪ್ಪಾಡಿಯಲ್ಲಿ ಬಸ್ಸಿನ ಚಕ್ರದಡಿಗೆ ಸಿಲುಕಿ ಬೈಕ್ ಸವಾರ ಸಾವು

ಕಟಪ್ಪಾಡಿಯಲ್ಲಿ ಬಸ್ಸಿನ ಚಕ್ರದಡಿಗೆ ಸಿಲುಕಿ ಬೈಕ್ ಸವಾರ ಸಾವು

- Advertisement -
- Advertisement -

ಉಡುಪಿ:   ಕೆಎಸ್ ಆರ್ ಟಿ ಸಿ ಬಸ್ಸೊಂದು ಬೈಕಿಗೆ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್ ಬಳಿ ನಿನ್ನೆ ರಾತ್ರಿ ನಡೆದಿದೆ.

ಕಟಪಾಡಿ ಅಚ್ಚಡ ವಿದ್ಯಾನಗರ ನಿವಾಸಿ ಯಶೋಧರ ಆಚಾರ್ಯ (50) ಮೃತ ದುರ್ದೈವಿ. ಕಟಪ್ಪಾಡಿಯ ಗ್ಲಾಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯಶೋಧರ ಆಚಾರ್ಯ, ನಿನ್ನೆ ರಾತ್ರಿ ಬೈಕ್ ನಲ್ಲಿ ಶಿರ್ವ ರಸ್ತೆಯಿಂದ ಹೊರಟು ಹೆದ್ದಾರಿ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಅತೀ ವೇಗವಾಗಿ ಬಂದ ಬಸ್ಸು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ರಸ್ತೆಗೆ ಬಿದ್ದ ಬೈಕ್ ಬಸ್ಸಿನ ಚಕ್ರದಡಿ ಸಿಲುಕಿ ಹೆದ್ದಾರಿಯಲ್ಲಿ ಸುಮಾರು 50 ಅಡಿ ದೂರಕ್ಕೆ ಎಳೆದೊಯ್ಯಲ್ಪಟ್ಟಿದೆ.

ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಯಶೋಧರ ಆಚಾರ್ಯ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!