Thursday, May 9, 2024
Homeತಾಜಾ ಸುದ್ದಿಭಯೋತ್ಪಾದಕ ಕೃತ್ಯಕ್ಕೆ ಪ್ರೋತ್ಸಾಹ ಆರೋಪ; ನಾಲ್ವರನ್ನು ಗಲ್ಲಿಗೇರಿಸಿದ ಮ್ಯಾನ್ಮಾರ್ ನ್ಯಾಯಾಲಯ

ಭಯೋತ್ಪಾದಕ ಕೃತ್ಯಕ್ಕೆ ಪ್ರೋತ್ಸಾಹ ಆರೋಪ; ನಾಲ್ವರನ್ನು ಗಲ್ಲಿಗೇರಿಸಿದ ಮ್ಯಾನ್ಮಾರ್ ನ್ಯಾಯಾಲಯ

spot_img
- Advertisement -
- Advertisement -

ಆಂಗ್ ಸಾನ್ ಸೂಕಿ ಪಕ್ಷದ ಮಾಜಿ ಶಾಸಕಿ ಮತ್ತು ಪ್ರಮುಖ ಕಾರ್ಯಕರ್ತರು ಸೇರಿದಂತೆ ನಾಲ್ವರು ಕೈದಿಗಳನ್ನು ಮ್ಯಾನ್ಮಾರ್‌ನ ಜುಂಟಾ ಗಲ್ಲಿಗೇರಿಸಿದೆ. ದಶಕಗಳ ಬಳಿಕ ಮೊದಲ ಬಾರಿಗೆ ಮರಣದಂಡನೆ ಶಿಕ್ಷೆಯನ್ನು ಮಿಲಿಟರಿ ಆಡಳಿತ ಬಳಸಿದೆ.

ಭಯೋತ್ಪಾದಕ ಕ್ರೂರ ಮತ್ತು ಅಮಾನವೀಯ ಕೃತ್ಯಗಳಿಗಾಗಿ ನಾಲ್ವರನ್ನು ಗಲ್ಲಿಗೇರಿಸಲಾಗಿದೆ. ಯಾರಿಗೂ ಸೂಚನೆಯೂ ನೀಡದೆ ನಾಲ್ವರನ್ನು ಗಲ್ಲಿಗೇರಿಸಲಾಗಿದೆ. ಜೈಲಿನ ಕಾರ್ಯವಿಧಾನದ ಅಡಿಯಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂದು ಮ್ಯಾನ್ಮಾರ್‌ನ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನು ಮರಣದಂಡನೆ ಸುದ್ದಿ ಪ್ರಕಟವಾದ ನಂತರ ಅವರ ದೇಹಗಳನ್ನು ಹಿಂಪಡೆಯುವ ಭರವಸೆಯಲ್ಲಿ ಕುಟುಂಬ ಸದಸ್ಯರು ಯಾಂಗೋನ್‌ನ ಇನ್ಸೈನ್ ಜೈಲಿನ ಹೊರಗೆ ಜಮಾಯಿಸಿದ್ದರು. ಕಳೆದ ವರ್ಷ ಅಧಿಕಾರವನ್ನು ಮಿಲಿಟರಿ ವಶಪಡಿಸಿಕೊಂಡ ನಂತರ ಭಿನ್ನಾಭಿಪ್ರಾಯದ ವಿರುದ್ಧ ಶಿಸ್ತುಕ್ರಮದ ಭಾಗವಾಗಿ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಮ್ಯಾನ್ಮಾರ್ ದಶಕಗಳಿಂದ ಮರಣದಂಡನೆಯನ್ನು ವಿಧಿಸಿರಲಿಲ್ಲ. ಖಂಡಿಸಿದ ವಿಶ್ವಸಂಸ್ಥೆ ಆಯೋಗಮರಣದಂಡನೆ ಎನ್ನುವುದು “ಅತಿ ಕ್ರೌರ್ಯದ ಕೃತ್ಯ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಖಂಡಿಸಿದೆ.

ಈ ಕುರಿತು ಸರ್ಕಾರೇತರ ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್, “ರಾಷ್ಟ್ರಗಳು ತಮ್ಮ ಪ್ರಜೆಗಳ ಮೇಲೆ ದೌರ್ಜನ್ಯ ಎಸಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಮತ್ತೊಂದು ಉದಾಹರಣೆ ಈ ಮರಣದಂಡನೆ. ಮ್ಯಾನ್ಮಾರ್‌ನಲ್ಲಿ ಇನ್ನೂ ನೂರು ಮಂದಿ ಮರಣದಂಡನೆಗೆ ಗುರಿಯಾಗುವ ಭೀತಿಯಲ್ಲಿದ್ದಾರೆ” ಎಂದು ಎಚ್ಚರಿಸಿದೆ. ರಾಜತಾಂತ್ರಿಕ ಖಂಡನೆಕಳೆದ ತಿಂಗಳು ಮರಣದಂಡನೆಯನ್ನು ಜಾರಿಗೊಳಿಸುವ ಉದ್ದೇಶವನ್ನು ಘೋಷಿಸಿದಾಗ ಜುಂಟಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆ ವ್ಯಕ್ತಪಡಿಸಿದೆ.

- Advertisement -
spot_img

Latest News

error: Content is protected !!