Monday, June 8, 2026
Homeಕರಾವಳಿಸ್ಫೋರ್ಟ್ಸ್ ಶಾಪ್ ನ  ಟ್ರಯಲ್ ರೂಂನಲ್ಲಿ ಮೊಬೈಲ್ ಕ್ಯಾಮೆರಾವಿಟ್ಟ ಸೇಲ್ಸ್ ಮ್ಯಾನ್: ಯುವಕನನ್ನು ಪೊಲೀಸರಿಗೆ ಒಪ್ಪಿಸಿದ...

ಸ್ಫೋರ್ಟ್ಸ್ ಶಾಪ್ ನ  ಟ್ರಯಲ್ ರೂಂನಲ್ಲಿ ಮೊಬೈಲ್ ಕ್ಯಾಮೆರಾವಿಟ್ಟ ಸೇಲ್ಸ್ ಮ್ಯಾನ್: ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಯುವತಿ

- Advertisement -
- Advertisement -

ಕಾಸರಗೋಡು: ಸ್ಫೋರ್ಟ್ಸ್ ಶಾಪ್ ಗೆ ಸ್ಟೋರ್ಟ್ಸ್ ಬಟ್ಟೆ ಖರೀದಿಸಲು ಯುವತಿಯೊಬ್ಬಳು ಬಂದು ಟ್ರಯಲ್‌ ರೂಂಗೆ ತೆರಳಿದಾಗ ಅಲ್ಲಿ ಅಂಗಡಿಯ ಸೇಲ್ಸ್ ಮ್ಯಾನ್ ಮೊಬೈಲ್ ಕ್ಯಾಮೆರಾವಿಟ್ಟ ಘಟನೆ ಕಾಸರಗೋಡಿನ ಕುಂಬಳೆಯ ಬಂದ್ಯೋಡ್ ಜಂಕ್ಷನಿನ ರಾಜಮಾರ್ಗದ ಸಮೀಪವಿರುವ ಚಾಂಪಿಯನ್ ಸ್ಟೋರ್ಟ್ಸ್ ಶಾಪ್ ನಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಲ್ಸ್ ಮ್ಯಾನ್ ಆಸೀಫ್ (24) ಎಂಬಾತನನ್ನು ಪೋಕ್ಸೋ ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ‌.

ಚಾಂಪಿಯನ್ ಸ್ಟೋರ್ಟ್ಸ್ ಶಾಪ್ ಗೆ ಬಟ್ಟೆ ಖರೀದಿಸಲು ಎಂದು ಹುಡುಗಿಯೊಬ್ಬಳು ತನ್ನ  ಮಾವನೊಂದಿಗೆ ತೆರಳಿದ್ದಾಳೆ.  ಬಟ್ಟೆ ಅಂಗಡಿಯ ಸೇಲ್ಸ್ ಮ್ಯಾನ್ ಆಸಿಫ್ ಮಾವನ ಗೆಳೆಯನಾಗಿದ್ದನು. ಹುಡುಗಿ ಬಟ್ಟೆ ಖರೀದಿ ಮಾಡುತ್ತಿದ್ದ ವೇಳೆ ಆಸೀಫ್ ಟ್ರಯಲ್ ರೂಂನೊಳಗೆ ತೆರಳಿ ಟ್ರಯಲ್ ನೋಡಲು ಒತ್ತಾಯಿಸಿದ್ದಾನೆ‌. ಹುಡುಗಿ ಹೋದಾಗ ಆತ  ವೀಡಿಯೋ ಮಾಡುತ್ತಿರುವುದು ಆಕೆಗೆ ಗೊತ್ತಾಗಿದೆ.

ಆಕೆ ತನ್ನ ಮಾವನಿಗೆ ವಿಷಯ ತಿಳಿಸಿದ್ದಾಳೆ. ಈ ವೇಳೆ ಆತನ ಮೊಬೈಲ್ ಪರೀಕ್ಷಿಸಿದಾಗ ನಿಜಾಂಶ ಗೊತ್ತಾಗಿದೆ‌. ಬಳಿಕ ಪೊಲೀಸರಿಗೆ‌ ದೂರು ನೀಡಿದ್ದು ಆತನನ್ನು ಬಂಧಿಸಿದ್ದಾರೆ‌.

- Advertisement -

Latest News

error: Content is protected !!