Thursday, June 4, 2026
Homeಕರಾವಳಿನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ: ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಣಿರಾಜ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ...

ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ: ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಣಿರಾಜ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ.ವಿ. ತೀರ್ಥರಾಮ ನೇಮಕ

- Advertisement -
- Advertisement -

ಬೆಂಗಳೂರು: ತೆರವಾಗಿದ್ದ ವಿವಿಧ ನಿಗಮ ಮತ್ತು ಮಂಡಳಿಗೆ ಇಂದು ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಣಿರಾಜ ಶೆಟ್ಟಿ ನೇಮಕವಾಗಿದ್ದು,
ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎ.ವಿ. ತೀರ್ಥರಾಮ ನೇಮಕಗೊಂಡಿದ್ದಾರೆ.

ಈ ಮೂಲಕ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರ ಸ್ವಕ್ಷೇತ್ರ ಸುಳ್ಯ ತಾಲೂಕಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಅವರ ಸ್ವಕ್ಷೇತ್ರ ಕಾರ್ಕಳ ತಾಲೂಕಿಗೆ ತಲಾ ಒಂದೊಂದು ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದಂತಾಗಿದೆ.

ಈ ಪೈಕಿ ಕಳೆದ ಬಾರಿ ನಿಗಮದ ಅಧ್ಯಕ್ಷರಾಗಿದ್ದ ಮಣಿರಾಜ ಶೆಟ್ಟಿ ಅವರನ್ನು ಮರು ನೇಮಕಾತಿ ಮಾಡಲಾಗಿದೆ.

- Advertisement -

Latest News

error: Content is protected !!