Saturday, April 27, 2024
Homeಕರಾವಳಿಉಡುಪಿಉಡುಪಿ: ಮೀನುಗಾರರ ಗಾಳಕ್ಕೆ ಬಿದ್ದ ಅಪರೂಪದ ಭಾರೀ ಗಾತ್ರದ ಮೀನುಗಳು

ಉಡುಪಿ: ಮೀನುಗಾರರ ಗಾಳಕ್ಕೆ ಬಿದ್ದ ಅಪರೂಪದ ಭಾರೀ ಗಾತ್ರದ ಮೀನುಗಳು

spot_img
- Advertisement -
- Advertisement -

ಉಡುಪಿ: ಕಟಪಾಡಿ ಸಮೀಪದ ಪುಟ್ಟದ್ವೀಪ ಕಟಪಾಡಿ ಪಾರ್ ಬಳಿ ಅರಬಿ ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ನಾಗೇಶ್ ಉದ್ಯಾವರ ಇವರ ಗಾಳಕ್ಕೆ 22ಕೆ.ಜಿ ಹಾಗೂ 12 ಕೆ.ಜಿ.ತೂಕದ ಮೀನುಗಳು ಸಿಕ್ಕಿ ಬಿದ್ದಿವೆ.

ಉದ್ಯಾವರದಲ್ಲಿ ಕೇಬಲ್ ಆಪರೇಟರ್ ಆಗಿರುವ ನಾಗೇಶ್ ಉದ್ಯಾವರ ಹವ್ಯಾಸಿ ಮೀನುಗಾರ. ವಾರಕ್ಕೊಮ್ಮೆ ಸಣ್ಣ ದೋಣಿಯಲ್ಲಿ ಸ್ನೇಹಿತರೊಂದಿಗೆ ಕಟಪಾಡಿ ಪಾರ್ ಆಸುಪಾಸು ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಇವರ ಗಾಳಕ್ಕೆ ಭಾರೀ ಗಾತ್ರದ ಅಪರೂಪದ ಮೀನುಗಳು ಸಿಕ್ಕಿವೆ.

ಮೊದಲು 22ಕೆ.ಜಿ.ತೂಕದ ಮುರು ಮೀನು ಸಿಕ್ಕಿದ್ದು, ಮತ್ತೆ ಪ್ರಯತ್ನ ಮುಂದುವರಿಸಿದಾಗ 12 ಕೆ.ಜಿ.ತೂಕದ ಕೊಕ್ಕರ್ ಮೀನು ಸಿಕ್ಕಿ ಹಾಕಿಕೊಂಡಿತು ಎಂದು ನಾಗೇಶ್ ಉದ್ಯಾವರ ತಿಳಿಸಿದ್ದಾರೆ. ನಾನು ಇಷ್ಟು ದೊಡ್ಡ ಗಾತ್ರದ ಮುರು ಹಾಗೂ ಕೊಕ್ಕರ್ ಮೀನುಗಳನ್ನು ನೋಡಿದ್ದು ಇದೇ ಮೊದಲು ಎಂದವರು ಹೇಳಿದ್ದಾರೆ.

ನಾಗೇಶ್ ಮತ್ತು ಸ್ನೇಹಿತರು ಮೀನು ಹಿಡಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಂದು ಅದೇ ಜಾಗದಲ್ಲಿ ತನಗೆ ಐದಾರು ಮೀನುಗಳು ಗಾಳಕ್ಕೆ ಸಿಕ್ಕಿದ್ದು, ಅವೆಲ್ಲ ಐದಾರು ಕೆ.ಜಿ.ಮಾತ್ರ ತೂಗುತ್ತಿದ್ದವು ಎಂದು ನಾಗೇಶ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!