Friday, June 5, 2026
Homeಕರಾವಳಿಕಾಸರಗೋಡುಕಾಸರಗೋಡಿನಲ್ಲಿ ‌ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ, ಮೂವರು‌ ಸಾವು

ಕಾಸರಗೋಡಿನಲ್ಲಿ ‌ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ, ಮೂವರು‌ ಸಾವು

- Advertisement -
- Advertisement -

ಕಾಸರಗೋಡು;ಕಾರಿಗೆ ಟಿಪ್ಪರ್  ಢಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ ಓರ್ವ ಗಾಯಗೊಂಡ ಘಟನೆ ರಾತ್ರಿ ನೀಲೇಶ್ವರ ಕೊಲ್ಲಂಪಾರೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ 8.30ರ ವೇಳೆ ಅಪಘಾತ ನಡೆದಿದೆ.

ಕರಿಂದಲದ ನಿವಾಸಿ ಕೆ.ಶ್ರೀರಾಗ್,ಕಿಶೋರ್ ಮತ್ತು ಅನುಷ್ ಮೃತರು.ಬಿನು ಎಂಬವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು,ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಮೃತದೇಹದ ಹಸ್ತಾಂತರ ನಡೆಯಲಿದೆ.

- Advertisement -

Latest News

error: Content is protected !!