Thursday, June 4, 2026
Homeಕರಾವಳಿಸುಳ್ಯ; ಮನೆಗೆ ನುಗ್ಗಿ ವೃದ್ಧೆಯ ಸರ ಕದ್ದ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

ಸುಳ್ಯ; ಮನೆಗೆ ನುಗ್ಗಿ ವೃದ್ಧೆಯ ಸರ ಕದ್ದ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಸುಳ್ಯ: ಇಲ್ಲಿನ ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ  ಒಬ್ಬಂಟಿಯಾಗಿದ್ದ ವೃದ್ಧ ಮಹಿಳೆಯ ನುಗ್ಗಿ‌ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿಯಾದ ಆರೋಪಿ ಸಲೀಂ ಪಿ.ಎ. (34) ಎಂಬಾತನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ನ. 28ರಂದು ಬೆಳಿಗ್ಗೆ 10.30ಕ್ಕೆ ಓರ್ವ ಅಪರಿಚಿತ ವ್ಯಕ್ತಿ ಜಾಲ್ಸೂರು ಗ್ರಾಮದ ಶ್ರೀಮತಿ ಕಮಲ (64) ಎಂಬವರ ಮನೆಗೆ ಹೋಗಿ ನೀರು ಕೇಳುವ ನೆಪದಲ್ಲಿ ಮನೆಯ ಒಳಗೆ ಪ್ರವೇಶಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವುದಾಗಿ ಅವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ವಿಶೇಷ ತಂಡ ರಚಿಸಿದ ಪೋಲೀಸರು ಕೇರಳದ ದೇಲಂಪಾಡಿ ಗ್ರಾಮದ ಕೊಟ್ಯಾಡಿ ಬಳಿ ಗುರುವಾರ ಆರೋಪಿ ಸಲೀಂನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿಯು ವೃದ್ದ ಮಹಿಳೆಯ ಕುತ್ತಿಗೆಯಿಂದ ಕಿತ್ತುಕೊಂಡು ಹೋಗಿದ್ದ ರೂ. 45,000 ಮೌಲ್ಯದ ಚಿನ್ನದ ಸರದ ತುಂಡು ಹಾಗೂ ಅತ ಕೃತ್ಯಕ್ಕೆ ಬಳಸಿದ ಬೈಕ್ ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದುಬಂದಿದೆ.

- Advertisement -

Latest News

error: Content is protected !!