Saturday, June 6, 2026
Homeಅಪರಾಧಉಡುಪಿ : ಲಾರಿ ಹರಿದು ಎಂಟು ವರ್ಷದ ಬಾಲಕಿ ಮೃತ್ಯು !

ಉಡುಪಿ : ಲಾರಿ ಹರಿದು ಎಂಟು ವರ್ಷದ ಬಾಲಕಿ ಮೃತ್ಯು !

- Advertisement -
- Advertisement -

ಉಡುಪಿ : ಎಂಟು ವರ್ಷದ ಬಾಲಕಿ ಮೇಲೆ ಲಾರಿ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಅಂಬಾಗಿಲು ಬಳಿ ಸಂಭವಿಸಿದೆ.

ಪ್ರಣಮ್ ಜಿ ನಾಯಕ್ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಪ್ರಣಮ್ ತಾಯಿ ದಿವ್ಯ ಜಿ ನಾಯಕ್ ಜೊತೆ ಸ್ಕೂಟರ್ ಹಿಂಬದಿಯಲ್ಲಿ ಕುಳಿತು ಸಂತೆಕಟ್ಟೆ ಕಡೆಯಿಂದ ಉಡುಪಿಯತ್ತ ಸಂಚರಿಸುತ್ತಿದ್ದಾಗ ಅಂಬಾಗಿಲು ಜಂಕ್ಷನ್ ಬಳಿ ರಾ.ಹೆ.66ರಲ್ಲಿ ಶನಿವಾರ ಸಂಜೆ 4:00 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ವೇಗವಾಗಿ ಸ್ಕೂಟರ್ ಹಿಂಬದಿಯಿಂದ ಬಂದ ಟ್ರಾನ್ಸಿಟ್ ಮಿಕ್ಸರ್ ಲಾರಿ ಸ್ಕೂಟರ್ ನ ಬಲಬದಿಗೆ ಢಿಕ್ಕಿ ಹೊಡೆದಿದ್ದು, ತಾಯಿ ಮಗು ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದರು. ಈ ವೇಳೆ ತಾಯಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದರೆ, ಬಾಲಕಿ ಮೇಲೆ ಲಾರಿ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ನಗರದ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!