Saturday, June 6, 2026
Homeಕರಾವಳಿಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಡು ಪ್ರಾಣಿಗಳ ಹಾವಳಿ!

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಡು ಪ್ರಾಣಿಗಳ ಹಾವಳಿ!

- Advertisement -
- Advertisement -

ಮಂಗಳೂರು: ಕಾಡು ಪ್ರಾಣಿಗಳು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಚಿರತೆ, ನರಿ, ಕಾಡುಹಂದಿ ಸೇರಿದಂತೆ ನವಿಲುಗಳು ರನ್ ವೇನಲ್ಲಿ ಓಡಾಡುತ್ತಿರುವುದು ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಮಾನ ನಿಲ್ದಾಣ ಇರುವ ಪ್ರದೇಶ ಸೇರಿದಂತೆ ಆಸುಪಾಸಿನ ಅದ್ಯಪಾಡಿ, ಕೆಂಜಾರು, ಪ್ರದೇಶಗಳು ಗುಡ್ಡ ಪ್ರದೇಶವಾಗಿದ್ದು, ಸಾಕಷ್ಟು ಮರಮಟ್ಟುಗಳು ಬೆಳೆದು ಕಾಡು ಪ್ರಾಣಿಗಳ ವಾಸ ಸ್ಥಳವಾಗಿದೆ ಇದೀಗ ರನ್ ವೇನಲ್ಲಿ ಪ್ರಾಣಿಗಳು ಓಡಾಟ ನಡೆಸುತ್ತಿರುವುದು ಅಪಾಯವಾಗಿದ್ದು, ವಿಮಾನ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಸಂದರ್ಭದಲ್ಲಿ ಪ್ರಾಣಿಗಳು ಓಡಾಟ ನಡೆಸಿದ್ದಲ್ಲಿ ಅವಘಡಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಈ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳು ರನ್ ವೇನಲ್ಲಿ ಪ್ರಾಣಿಗಳ ಓಡಾಟ ನಡೆಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಅಧಿಕಾರಿಗಳ ಮನವಿಯ ಹಿನ್ನೆಲೆಯಲ್ಲಿ ಎರಡು ಮೂರು ಬಾರಿ ಅರಣ್ಯ ಇಲಾಖೆ ಕ್ಯೂಬಿಂಗ್ ನಡೆಸಿತ್ತು. ಅಲ್ಲದೆ ಇದೀಗ ಎರಡು ಬೋನುಗಳನ್ನು ಇರಿಸಿ ಪ್ರಾಣಿಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಆದರೆ ಈ ವರೆಗೆ ಯಾವುದೇ ಪ್ರಾಣಿ ಬೋನಿಗೆ ಬಿದ್ದಿಲ್ಲ. ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳಿದ್ದು, ಚಿರತೆ ಸೇರಿದಂತೆ ಕಾಡುಪ್ರಾಣಿಗಳಿಂದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳನ್ನು ಮಾತ್ರ ಚಿರತೆ ಹೊತ್ತೊಯ್ದದ್ದಿದೆ

- Advertisement -

Latest News

error: Content is protected !!