Sunday, May 19, 2024
Homeಇತರಕಾಲೇಜಿನ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ..! ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಎಬಿವಿಪಿ ಸಂಘಟನೆಯಿಂದ ಪುತ್ತೂರು ತಹಸೀಲ್ದಾರರಿಗೆ...

ಕಾಲೇಜಿನ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ..! ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಎಬಿವಿಪಿ ಸಂಘಟನೆಯಿಂದ ಪುತ್ತೂರು ತಹಸೀಲ್ದಾರರಿಗೆ ಮನವಿ…!

spot_img
- Advertisement -
- Advertisement -

ಪುತ್ತೂರು: ಕಾಲೇಜಿನ ವಿದ್ಯಾರ್ಥಿಯ ಮೇಲೆ ದೈಹಿಕ ಶಿಕ್ಷಣ ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯದಂತಹ ಕೃತ್ಯವನ್ನು ಎಸಗಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ. ಈ ಪ್ರಕರಣಕ್ಕೆ ಸಂಬಂಧಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನಿಖೆ ಮಾಡಬೇಕು. ಸಂತ್ರಸ್ತೆಗೆ ನ್ಯಾಯ ಒದಗಿಸಿ, ವಾಸ್ತವ ಅಂಶವನ್ನು ಸಮಾಜದ ಮುಂದಿಡುವಂತೆ ಎಬಿವಿಪಿ ಪುತ್ತೂರು ತಹಸೀಲ್ದಾರ್ ಗೆ ಮನವಿ ಮಾಡಿದೆ.

ತಹಸೀಲ್ದಾರ್ ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದರು. ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತ್ವರಿತ ತನಿಖೆಯನ್ನು ಮಾಡಬೇಕೆಂದು ಎಬಿವಿಪಿಯಿಂದ ಆಗ್ರಹಿಸುತ್ತೇವೆ. ಇದರ ಜೊತೆಗೆ ಪ್ರಕರಣದಲ್ಲಿ ಸಹಜವಾಗಿ ಸಂತ್ರಕ್ಕೆ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು, ಹಾಗೂ ಆರೋಪಿ ವ್ಯಕ್ತಿಯನ್ನು ಸಮಗ್ರ ತನಿಖೆಗೆ ಒಳಪಡಿಸಿ ವಾಸ್ತವ ಅಂಶವನ್ನು ಸಮಾಜದ ಮುಂದೆ ಇಡಬೇಕೆಂದು. ಒಂದು ವೇಳೆ ಈ ಘಟನೆಯಲ್ಲಿ ಷಡ್ಯಂತ್ರ ನಡೆದಿದೆ ಎಂದಾದರೆ ಇದನ್ನೂ ಕೂಡಾ ಸಮಗ್ರವಾಗಿ ಸಮಾಜದ ಮುಂದೆ ಇಡಬೇಕೆಂದು ಎಬಿವಿಪಿ ಪ್ರಮುಖರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ಮಂಗಳೂರು ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ಪುತ್ತೂರು ನಗರ ಕಾರ್ದರ್ಶಿ ಜಗದೀಶ್ ಪುತ್ತೂರು, ಮಂಗಳೂರು ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ, ಬಂಟ್ವಾಳ ತಾಲೂಕು ಸಂಚಾಲಕ್ ದಿನೇಶ್ ಕೊಯಿಲ, ಶ್ರೇಯಸ್ ಶೆಟ್ಟಿ, ಆದಿತ್ಯ ಶೆಟ್ಟಿ, ನಾಗರಾಜ್ ಶೆಣೈ, ಕಾರ್ತಿಕ್ ಪುತ್ತೂರು, ಆದಿತ್ಯ, ಗುರುಪ್ರಸಾದ್, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!