Sunday, July 6, 2025
Homeತಾಜಾ ಸುದ್ದಿಆಮೀರ್‌ ಖಾನ್‌ ಉಪೇಂದ್ರ ಅವರ ಅಭಿಮಾನಿಯಂತೆ; ಹೀಗೆಂದು ‘ಯುಐ’ ಸಿನಿಮಾಗೆ ಶುಭ ಹಾರೈಸಿ, ಪೋಸ್ಟ್ ಹಂಚಿಕೊಂಡ ಆಮೀರ್‌ ಖಾನ್‌

ಆಮೀರ್‌ ಖಾನ್‌ ಉಪೇಂದ್ರ ಅವರ ಅಭಿಮಾನಿಯಂತೆ; ಹೀಗೆಂದು ‘ಯುಐ’ ಸಿನಿಮಾಗೆ ಶುಭ ಹಾರೈಸಿ, ಪೋಸ್ಟ್ ಹಂಚಿಕೊಂಡ ಆಮೀರ್‌ ಖಾನ್‌

spot_img
- Advertisement -
- Advertisement -

ನಟ, ನಿರ್ದೇಶಕ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಿ ನಿರ್ದೇಶಿಸಿರುವ ‘ಯುಐ’ ಸಿನಿಮಾಗೆ ಬಾಲಿವುಡ್‌ ನಟ ಆಮೀರ್‌ ಖಾನ್‌ ಶುಭ ಹಾರೈಸಿದ್ದಾರೆ.

ಈ ಸಿನಿಮಾ ಇದೇ ಡಿಸೆಂಬರ್‌ 20 ರಂದು ತೆರೆ ಕಾಣಲಿದ್ದು, ಸಿನಿಮಾ ಕುರಿತ ವೀಡಿಯೋವನ್ನು ಆಮೀರ್‌ ಖಾನ್‌ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ನಟ ಉಪೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ.

ಆಮೀರ್‌ ಖಾನ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ, ‘ನಾನು ಉಪೇಂದ್ರ ಅವರ ಅಭಿಮಾನಿಯಾಗಿದ್ದು, ಅವರ ಯುಐ ಸಿನಿಮಾ ಇದೇ ಡಿ.20 ರಂದು ರಿಲೀಸ್‌ ಆಗಲಿದೆ. ಟ್ರೈಲರ್‌ ನಿಜಕ್ಕೂ ಮನಸ್ಸಿಗೆ ಮುದ ನೀಡಿತು. ಟ್ರೈಲರ್‌ ನಿಜಕ್ಕೂ ಊಹಿಸಲು ಅಸಾಧ್ಯವಾಗಿದ್ದು, ಶಾಕ್‌ ಕೂಡ ಆಯಿತು. ಹಿಂದಿ ಅಭಿಮಾನಿಗಳು ಇದನ್ನು ಇಷ್ಟ ಪಟ್ಟಿದ್ದಾರೆ. ಸಿನಿಮಾ ಮತ್ತು ಚಿತ್ರತಂಡಕ್ಕೆ ಒಳ್ಳೆಯದಾಗಲಿ,’ ಎಂದು ಶುಭಾಶಯ ತಿಳಿಸಿದ್ದಾರೆ.

ಇನ್ನು ನಟ ಉಪೇಂದ್ರ ಆಮೀರ್‌ ಖಾನ್‌ ಅವರ ಮೆಚ್ಚುಗೆ ಮತ್ತು ಹಾರೈಕೆಗೆ ಕೃತಜ್ಞತೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!