- Advertisement -
![]()
- Advertisement -
ಧರ್ಮಸ್ಥಳ: ಇಲ್ಲಿಗೆ ಸಮೀಪದ ಪುದುವೆಟ್ಟು ಗ್ರಾಮದ ಪಾದೆ ಎಂಬಲ್ಲಿ ಮೀನಾಕ್ಷಿ (22)ಎಂಬ ಮಹಿಳೆಗೆ ಕಳೆದ ಮೂರು ದಿನದ ಹಿಂದೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಬಟ್ಟೆಗೆ ಬೆಂಕಿ ತಗುಲಿ ದೇಹವಿಡೀ ಭಾಗಶಃ ಸುಟ್ಟು ಗಾಯಗೊಂಡಿದೆ.

ಮೂರು ದಿನದಿಂದಲೂ ನಾಟಿ ಔಷಧಿಯನ್ನು ಮಾಡುತ್ತಿದ್ದರೆನ್ನಲಾಗಿದೆ. ಇದರ ಮಧ್ಯೆ ಗಾಯ ಉಲ್ಬಣಗೊಂಡದ್ದನ್ನು ಅರಿತು ಕೊಕ್ಕಡದ 108 ಆಂಬುಲೆನ್ಸ್ ಚಾಲಕ ಗಿರೀಶ್ ಹಾಗು ಶುಶ್ರೂಶಕಿ ವಿಲ್ಮಾ ರವರ ಸಮಯ ಪ್ರಜ್ಞೆಯಿಂದ ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ಕರ್ತವ್ಯ ನಿರತ ವೈದ್ಯರಾದ ಡಾ. ಶಶಾಂಕ್ ಕಾಂಬ್ಳೆ ಅವರ ಸೂಚನೆ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -


