Tuesday, June 9, 2026
Homeಕರಾವಳಿಉಡುಪಿಕಾರ್ಕಳ: ದೋಷ ನಿವಾರಣೆ ಹೆಸರಿನಲ್ಲಿ ವ್ಯಕ್ತಿಗೆ 30 ಲಕ್ಷ ವಂಚಿಸಿದ ಮಹಿಳೆ !

ಕಾರ್ಕಳ: ದೋಷ ನಿವಾರಣೆ ಹೆಸರಿನಲ್ಲಿ ವ್ಯಕ್ತಿಗೆ 30 ಲಕ್ಷ ವಂಚಿಸಿದ ಮಹಿಳೆ !

- Advertisement -
- Advertisement -

ಕಾರ್ಕಳ: ಮರುಳು ಮಾತುಗಳಿಂದ ನಂಬಿಸಿ ಮಾಟ, ಮಂತ್ರ, ದೋಷದ ಹೆಸರಿನಲ್ಲಿ ಮಹಿಳೆಯೋರ್ವರು ವ್ಯಕ್ತಿಯೋರ್ವರಿಂದ ಹಂತ ಹಂತವಾಗಿ 30 ಲಕ್ಷ ರೂ. ಪಡೆದು ವಂಚಿಸಿದ ಘಟನೆಯ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುನೀತಾ ಮೆಂಡೋನ್ಸ ಎಂಬವರೇ ವಂಚಿಸಿದ ಮಹಿಳೆ ಎಂದು ವರದಿಯಾಗಿದೆ.

ಮಹಿಳೆಯ ಮಾತು ನಂಬಿದ್ದ ವ್ಯಕ್ತಿ, ತನ್ನ ಪತ್ನಿಯ ಮಾಂಗಲ್ಯ ಸರ ಸೇರಿ ಎಲ್ಲವನ್ನೂ ಮಾರಿ 10 ಲಕ್ಷ, 80 ಸಾವಿರ, 1 ಲಕ್ಷ 5 ಸಾವಿರ, 50 ಸಾವಿರ, 1 ಲಕ್ಷ ಹೀಗೆ ಹೆಂಡತಿ ತಂದೆಯಿಂದ, ಸಹೋದರನಿಂದ, ಸ್ನೇಹಿತರಿಂದ, ಹೀಗೆ ಪಡೆದು ಒಟ್ಟು 30 ಲಕ್ಷ ರೂ. ಹಣವನ್ನು ಆಪಾದಿತೆ ಮಹಿಳೆ ಸುನೀತಾ ಮೆಂಡೋನ್ಸಾ ಎಂಬವರಿಗೆ ನೀಡಿದ್ದಾರೆ. ಆಕೆಯ ಹಣ ಪಡೆದು ವಂಚಿಸಿರುವುದಾಗಿ ದೂರುದಾರರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!