Saturday, April 20, 2024
Homeಉದ್ಯಮವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಸತತ 12 ನೇ ದಿನವೂ ತೈಲ ದರ ಏರಿಕೆ

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಸತತ 12 ನೇ ದಿನವೂ ತೈಲ ದರ ಏರಿಕೆ

spot_img
- Advertisement -
- Advertisement -

ನವದೆಹಲಿ: ದಿನೇದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದುಬಾರಿಯಾಗುತ್ತಿದ್ದು, ಸತತ 12 ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಇಂದು 1 ಲೀಟರ್ ಪೆಟ್ರೋಲ್ ಬೆಲೆ 39 ಪೈಸೆಯಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆ 1 ಲೀಟರ್ ಗೆ 37 ಪೈಸೆಯಷ್ಟು ಹೆಚ್ಚಳ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 90.58 ರೂ., ಡೀಸೆಲ್ 80.97 ರೂಪಾಯಿಗೆ ಏರಿಕೆಯಾಗಿದೆ. ದೇಶದ ಕೆಲವೆಡೆ ಪೆಟ್ರೋಲ್ ದರ 100 ಗಡಿ ದಾಟಿ ಮುನ್ನುಗ್ಗುತ್ತಿದೆ.

ಪೆಟ್ರೋಲ್ ಬೆಲೆಯು ಮುಂಬೈನಲ್ಲಿ ₹ 93.04ಕ್ಕೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ₹ 93.60ಕ್ಕೆ, ಡೀಸೆಲ್‌ ₹ 85.81ಕ್ಕೆ ಮಾರಾಟವಾಗುತ್ತಿದೆ.

- Advertisement -
spot_img

Latest News

error: Content is protected !!