Sunday, April 28, 2024
Homeಕರಾವಳಿಮಂಗಳೂರಿನ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನುಗಳು

ಮಂಗಳೂರಿನ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನುಗಳು

spot_img
- Advertisement -
- Advertisement -

ಮಂಗಳೂರು: ಮಂಗಳೂರಿನ ಮೀನುಗಾರರ ಬಲೆಗೆ ಅಪರೂಪದ ಹಾರುವ 2 ಮೀನುಗಳು ಬಿದ್ದಿವೆ. ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳೂ ಸಿಕ್ಕಿವೆ ಎಂದು ಮೀನುಗಾರ ಲೋಕೇಶ್‌ ಬೆಂಗ್ರೆ ಮಾಹಿತಿ ನೀಡಿದ್ದಾರೆ.

ಹಾರುವ ಮೀನು ಹೆಚ್ಚಾಗಿ ಆಳಸಮುದ್ರದಲ್ಲಿರುವಂಥ ಮತ್ಸ್ಯ ಪ್ರಭೇದ. ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ ಎಗರಿ ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಹೊಂದಿವೆ.

15ರಿಂದ 45 ಸೆಂ.ಮೀ.ವರೆಗೆ ಉದ್ದವಾಗುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ಇತರ ಮೀನುಗಳಿಗೆ ಹೋಲಿಸಿದರೆ ಹಾರುವ ಮೀನುಗಳು ಹೆಚ್ಚು ರುಚಿಕರವಾಗಿರುತ್ತವೆ. ಆದರೆ, ಅದನ್ನು ಹಿಡಿಯುವ ಕ್ರಮ ಈ ಭಾಗದಲ್ಲಿ ಕಡಿಮೆ ಎಂದು ಮೀನುಗಾರ ಲೋಕೇಶ್​ ಬೆಂಗ್ರೆ ಹೇಳಿದ್ದಾರೆ.

- Advertisement -
spot_img

Latest News

error: Content is protected !!