Friday, June 5, 2026
Homeಕೊಡಗುಕುಶಾಲನಗರ: ನಾಪತ್ತೆಯಾಗಿದ್ದ ಎ.ಎಸ್.ಐ ಶವ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕುಶಾಲನಗರ: ನಾಪತ್ತೆಯಾಗಿದ್ದ ಎ.ಎಸ್.ಐ ಶವ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಕುಶಾಲನಗರ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಎಎಸ್ ಐ ಸುರೇಶ್ ರವರ ಶವ ಹಾಸನ ಜಿಲ್ಲೆ ಕೊಣನೂರಿನ ಕೆರೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುವುದರೊಂದಿಗೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮೂಲತಃ ಹಾಸನ ಜಿಲ್ಲೆಯ ಕೊಣನೂರು ಸಿದ್ದಾಪುರ ಗೇಟ್ ನವರಾದ ಅವರು ಕುಶಾಲನಗರದ ಸಂಚಾರಿ ಠಾಣೆಯಲ್ಲಿ ಎ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಅವರು ಕರ್ತವ್ಯದ ನಿಮಿತ್ತ ಮನೆಯಿಂದ ಹೋದವರು ಪೊಲೀಸ್ ಠಾಣೆಗೆ ತೆರಳದ ನಾಪತ್ತೆಯಾಗಿದ್ದರು, ಇತ್ತ ಮನೆಗೆ ಬಾರದ ಹಿನ್ನಲೆಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತಲ್ಲದೆ ಎಲ್ಲೂ ಸುಳಿವು ಸಿಗದೆ ಇದ್ದಾಗ ಪತ್ನಿ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದರು.

ಇದೀಗ ಅವರ ಶವವು ಹಾಸನ ಜಿಲ್ಲೆ ಕೊಣನೂರಿನ ಕೆರೆಯೊಂದರಲ್ಲಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!