Tuesday, May 14, 2024
Homeಕರಾವಳಿಉಡುಪಿಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಕಾರು ಡಿಕ್ಕಿ, ಗರ್ಭಿಣಿ ತಲೆಗೆ ತೀವ್ರ ಗಾಯ !

ಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಕಾರು ಡಿಕ್ಕಿ, ಗರ್ಭಿಣಿ ತಲೆಗೆ ತೀವ್ರ ಗಾಯ !

spot_img
- Advertisement -
- Advertisement -

ಉಡುಪಿ: ಉಡುಪಿ ತಾಲೂಕಿನ ಕಡಿಯಾಳಿ ರಾಷ್ಟ್ರೀಯ ಹೆದ್ದಾರಿ 169 ಎರಲ್ಲಿ ಕಾರೊಂದು ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ . ಓರ್ವ ಗರ್ಭಿಣಿ ಸಹಿತ ಮೂವರು ರಸ್ತೆಯ ಎಡಭಾಗದಿಂದ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಡೆಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ಮಣಿಪಾಲದಿಂದ ಉಡುಪಿ ಕಡೆಗೆ ವೇಗವಾಗಿ ಬರುತ್ತಿದ್ದ ಇನೋವಾ ಕಾರು ಮೂವರಿಗೂ ಡಿಕ್ಕಿ ಹೊಡೆದಿದೆ .

ಗರ್ಭಿಣಿ ಮಹಿಳೆಯ ತಲೆಗೆ ತೀವ್ರತರದ ಗಾಯವಾಗಿದೆ ಎಂದು ತಿಳಿದುಬಂದಿದೆ . ಅಪಘಾತದ ದೃಶ್ಯಾವಳಿ ಅಲ್ಲೇ ಪಕ್ಕದ ಶೋರೂಮ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ .

- Advertisement -
spot_img

Latest News

error: Content is protected !!