Monday, May 6, 2024
HomeWorldಅಮೆರಿಕಾ ರಹಸ್ಯ ಕಾರ್ಯಾಚರಣೆ- ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥನನ್ನು ಹೊಡೆದುರುಳಿಸಿದ ಅಮೆರಿಕದ ವಿಶೇಷ ಪಡೆಗಳು

ಅಮೆರಿಕಾ ರಹಸ್ಯ ಕಾರ್ಯಾಚರಣೆ- ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥನನ್ನು ಹೊಡೆದುರುಳಿಸಿದ ಅಮೆರಿಕದ ವಿಶೇಷ ಪಡೆಗಳು

spot_img
- Advertisement -
- Advertisement -

ಸಿರಿಯಾ: ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಇಬ್ರಾಹಿಂ ಅಲ್‌-ಹಶಿಮಿ ಅಲ್‌-ಖುರೈಷಿಯನ್ನು ಅಮೆರಿಕದ ವಿಶೇಷ ಪಡೆಗಳು ಸಿರಿಯಾದಲ್ಲಿ ಹೊಡೆದುರುಳಿಸಿದೆ.

ಸಿರಿಯಾದ ವಾಯವ್ಯ ಭಾಗದ ಇದ್ಲಿಬ್‌ ಪ್ರಾಂತ್ಯದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಆತನನ್ನು ಹತ್ಯೆಗೈಯ್ಯಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗುರುವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಹಾಗು ಅಮೆರಿಕದ ಜನ, ನಮ್ಮ ಮಿತ್ರ ರಾಷ್ಟ್ರಗಳು ಹಾಗೂ ಜಗತ್ತಿನ ರಕ್ಷಣೆ ದಿಸೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇಂತಹ ಶೌರ್ಯ ಮೆರೆದ ಅಮೆರಿಕ ಸೇನೆಗೆ ಧನ್ಯವಾದ,” ಎಂದು ಅಧ್ಯಕ್ಷ ಜೋ ಬೈಡೆನ್‌ ತಿಳಿಸಿದ್ದಾರೆ

ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅಮೆರಿಕದ ವಿಶೇಷ ಪಡೆಗಳು ಇದ್ಲಿಬ್‌ ಪ್ರಾಂತ್ಯದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದು, 2 ತಾಸು ಗುಂಡಿನ ಚಕಮಕಿ ನಡೆದಿದೆ. ಅಷ್ಟರಲ್ಲಿ ಅಲ್‌ಖುರೈಷಿ ತನ್ನನ್ನು ತಾನು ಬಾಂಬ್‌ ಮೂಲಕ ಸ್ಫೋಟಿಸಿಕೊಂಡಿದ್ದು, ಕುಟುಂಬ ಸಹಿತ ನಾಶವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!