Saturday, June 6, 2026
Homeಕರಾವಳಿಉಡುಪಿಉಡುಪಿ: ಪರೀಕ್ಷಾ ಸಮಯದಲ್ಲಿ ಕಾಲೇಜಿನಲ್ಲಿ ಕಲಿಕೆಯ ಬದಲು ಗಲಾಟೆ ಆರಂಭವಾಗಿದೆ ಹೀಗಾಗಿ ಜಿಲ್ಲಾಡಳಿತ ಕೂಡಲೇ ಕ್ರಮ...

ಉಡುಪಿ: ಪರೀಕ್ಷಾ ಸಮಯದಲ್ಲಿ ಕಾಲೇಜಿನಲ್ಲಿ ಕಲಿಕೆಯ ಬದಲು ಗಲಾಟೆ ಆರಂಭವಾಗಿದೆ ಹೀಗಾಗಿ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು: ವಿದ್ಯಾರ್ಥಿನಿಯರ ಮನವಿ

- Advertisement -
- Advertisement -

ಉಡುಪಿ: ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ಹದಗೆಟ್ಟಿದೆ, ಪರೀಕ್ಷಾ ಸಮಯದಲ್ಲಿ ಕಾಲೇಜಿನಲ್ಲಿ ಕಲಿಕೆಯ ಬದಲು ಗಲಾಟೆ ಆರಂಭವಾಗಿದೆ ಹೀಗಾಗಿ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಇತರ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ನಮ್ಮ ಕಾಲೇಜಿಗೆ ಹಲವಾರು ದಶಕಗಳ ಇತಿಹಾಸವಿದೆ, ಇಲ್ಲಿ ಯಾವುದೇ ರೀತಿಯ ತಾರತಮ್ಯ ಅನ್ಯಾಯ ನಡೆಯುತ್ತಿಲ್ಲ. ವಿನಾಕಾರಣ ವಿವಾದ ಸೃಷ್ಟಿಸಿ ಶೈಕ್ಷಣಿಕ ವಾತಾವರಣ ಹದಗೆಡಿಸುತ್ತಿದ್ದಾರೆ.

ಪರೀಕ್ಷಾ ಸಮಯದಲ್ಲಿ ಕಾಲೇಜಿನಲ್ಲಿ ಕಲಿಕೆಯ ಬದಲು ಗಲಾಟೆ ಆರಂಭವಾಗಿದ್ದು, ಶಾಲೆಗೆ ನಿತ್ಯವು ಪೊಲೀಸರು ಮತ್ತು ಮಾಧ್ಯಮದವರು ಬರುತ್ತಿದ್ದಾರೆ, ಕೇವಲ ಆರು ವಿದ್ಯಾರ್ಥಿನಿಯರಿಂದ 600 ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಇತರ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!