Sunday, June 28, 2026
Homeತಾಜಾ ಸುದ್ದಿಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿ..! ತಂದೆ-ಮಗ ಅಪಾಯದಿಂದ ಪಾರು

ಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿ..! ತಂದೆ-ಮಗ ಅಪಾಯದಿಂದ ಪಾರು

- Advertisement -
- Advertisement -

ಬೆಳ್ತಂಗಡಿ : ಅತಿ ಅಪಾಯಕಾರಿ ಸ್ಥಳವಾದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಧರ್ಪಿಂಜಾದ ಕನ್ನಾಜೆ-ಪಡ್ಲಾಡಿ ತಿರುವಿನಲ್ಲಿ ಇಂದು ಬೆಳಗ್ಗೆ ಲಾಯಿಲ ಪಡ್ಲಾಡಿ ನಿವಾಸಿ ದೇವರಾಜ್ ತಮ್ಮ ಬಜಾಜ್ ರಿಕ್ಷಾದಲ್ಲಿ ಎಂದಿನಂತೆ ಮಗ ಮತ್ತು ಸ್ಥಳೀಯ ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಗೆ ಬಿಡಲು ಬರುತ್ತಿದ್ದಾಗ ಅಪಾಯಕಾರಿ ತಿರುವು ಅಗಿರುವ ಕನ್ನಾಜೆ-ಪಡ್ಲಾಡಿ ಜಂಕ್ಷನ್ ನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸ್ಥಳೀಯರು ನಾಲ್ಕು ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋ ಚಾಲಕ ದೇವರಾಜ್ ಸೊಂಟಕ್ಕೆ ಗಾಯವಾಗಿದ್ದು ಅಪಾಯದಿಂದ ಪರಾಗಿದ್ದಾರೆ‌.

ಇನ್ನೂ ಇಲ್ಲಿ ಅಪಾಯಕಾರಿ ತಿರುವು ಇದ್ದು ಸರಿಯಾದ ರಸ್ತೆಯನ್ನು ಮಾಡದೆ ಇಲ್ಲಿ ವಾಹನಗಳು ಎದುರಿನಿಂದ ಬರುವುದು ಗೊತ್ತಾಗದೆ ಅನೇಕ ಭಾರಿ ಅಪಘಾತ ನಡೆದಿದೆ. ಇನ್ನೊಂದೆಡೆ ಕನ್ನಾಜೆ ,ಬದ್ಯಾರು ಕಡೆಗೆ ಹೊಸ ರಸ್ತೆ ನಿರ್ಮಾಣ ಅಗಿದ್ದು ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಗಲಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆ ರಸ್ತೆಯಲ್ಲಿ ಸೂಕ್ತ ರೀತಿಯ ವ್ಯವಸ್ಥೆ ಕಲ್ಪಿಸಬೇಕಾಗಿದೆ‌.

- Advertisement -

Latest News

error: Content is protected !!