- Advertisement -
![]()
- Advertisement -
ಮಂಗಳೂರು: ಮನೆಗೆ ನುಗ್ಗಿ ಕರಿಮಣಿ ಮತ್ತು ಮೊಬೈಲ್ ಕಳವುಗೈದಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳದ ಅಶ್ರಫ್ ಎಂದು ಗುರುತಿಸಲಾಗಿದೆ.
ಇಡ್ಯಾ ಗ್ರಾಮದ ಜನತಾ ಕಾಲನಿಯ ಸರಕಾರಿ ಶಾಲೆಯ ಬಳಿಯ ನಿವಾಸಿ ಸುನೀತಾ ಎಂಬವರು ಜ.17ರಂದು ಅಪರಾಹ್ನ 3ರಿಂದ 4:30ರ ಮಧ್ಯ ಹೊರಗೆ ಹೋಗಿದ್ದ ಸಂದರ್ಭ ಬಾಗಿಲಿನ ಬೀಗ ಮುರಿದು ಒಳ ನುಗಿದ ಆರೋಪಿ 24 ಗ್ರಾಂ ತೂಕದ ಕರಿಮಣಿ ಸರ ಮತ್ತು ಮೊಬೈಲ್ ಕಳವು ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಗುರುವಾರ ಸುರತ್ಕಲ್ ಪೊಲೀಸರು ಸೊತ್ತು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
- Advertisement -


