Thursday, June 4, 2026
Homeತಾಜಾ ಸುದ್ದಿಮರವೇರಿ ತೆಂಗಿನಕಾಯಿ ತೆಗೆಯುವಾಗ ಮರದಲ್ಲೇ ಹೃದಯಾಘಾತವಾಗಿ ವ್ಯಕ್ತಿ ಸಾವು

ಮರವೇರಿ ತೆಂಗಿನಕಾಯಿ ತೆಗೆಯುವಾಗ ಮರದಲ್ಲೇ ಹೃದಯಾಘಾತವಾಗಿ ವ್ಯಕ್ತಿ ಸಾವು

- Advertisement -
- Advertisement -

ಬೆಂಗಳೂರು: ಮರವೇರಿ ತೆಂಗಿನಕಾಯಿ ತೆಗೆಯುವಾಗ ಮರದಲ್ಲೇ ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.

ಮೈಲಸಂದ್ರ ನಿವಾಸಿಯಾಗಿರುವ ನಾರಾಯಣಪ್ಪ(60) ಮೃತರು. ಅವರು ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಸಮೀಪವಿರುವ 50 ಅಡಿ ತೆಂಗಿನಮರವನ್ನು ಏರಿದ್ದಾರೆ.

 ಆದರೆ ಎಷ್ಟೊತ್ತಾದರೂ ಅವರು ಕೆಳಗೆ ಬಂದಿರಲಿಲ್ಲ, ತೆಂಗಿನಕಾಯಿಯೂ ತೆಗೆದಿರಲಿಲ್ಲ. ಕೊನೆಗೆ ಅವರ ಮೊಬೈಲ್ ಗೆ ಕರೆ ಮಾಡಿದರೂ ನೋ ರೆಸ್ಪಾನ್ಸ್. ಅನುಮಾನಗೊಂಡ ಜೊತೆಯಲ್ಲಿದ್ದವರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಅವರನ್ನು ಕೆಳಗಿಳಿಸಿದ್ದಾರೆ. ಆಗ ನಾರಾಯಣಪ್ಪ ಮೃತಪಟ್ಟಿರುವುದು ಗೊತ್ತಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

- Advertisement -

Latest News

error: Content is protected !!