Wednesday, June 3, 2026
Homeಕರಾವಳಿಮೂಡಬಿದರೆ; ಧೂಳು ಹಾರಿಸಬೇಡ ನಿಧಾನವಾಗಿ ಟಿಪ್ಪರ್ ಚಲಾಯಿಸು ಎಂದಿದ್ದಕ್ಕೆ ಕೊಲೆಗೈದ ಪ್ರಕರಣ; ಆರೋಪಿ ಟಿಪ್ಪರ್ ಚಾಲಕ...

ಮೂಡಬಿದರೆ; ಧೂಳು ಹಾರಿಸಬೇಡ ನಿಧಾನವಾಗಿ ಟಿಪ್ಪರ್ ಚಲಾಯಿಸು ಎಂದಿದ್ದಕ್ಕೆ ಕೊಲೆಗೈದ ಪ್ರಕರಣ; ಆರೋಪಿ ಟಿಪ್ಪರ್ ಚಾಲಕ ಅರೆಸ್ಟ್

- Advertisement -
- Advertisement -

ಮೂಡಬಿದರೆ; ಧೂಳು ಹಾರಿಸಬೇಡ ನಿಧಾನವಾಗಿ ಟಿಪ್ಪರ್ ಚಲಾಯಿಸು ಎಂದಿದ್ದಕ್ಕೆ ಟಿಪ್ಪರ್ ಹರಿಸಿ ವ್ಯಕ್ತಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟಿಪ್ಪರ್ ಚಾಲಕನನ್ನು ಅರೆಸ್ಟ್ ಮಾಡಲಾಗಿದೆ.

ಕೋಟೆ ಬಾಗಿಲು ನಿವಾಸಿ ಆರೀಸ್‌ ಬಂಧಿತ. ಆರೋಪಿಗೆ ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ ಎಂದು  ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಹೇಳಿದ್ದರು. ಇದಕ್ಕೆ ಕೋಪಗೊಂಡ ಆತ  ರಾಡ್ ನಲ್ಲಿ ತಲೆಗೆ ಹೊಡೆದು ಅವರು ಕೆಳಗೆ ಬಿದ್ದಾಗ ಅವರ ಮೇಲೆ ಟಪ್ಪರ್‌ ಚಲಾಯಿಸಿದ್ದ. ಪರಿಣಾಮ ಗಂಭೀರ ಗಾಯಗೊಂಡಿದ್ದ ಫಯಾಝ್ ಅವರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದರು.

ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಟಿಪ್ಪರ್‌ ಚಾಲಕ ಆರೀಸ್‌ನನ್ನು ಸೆರೆ ಹಿಡಿಯಲು ಪೊಲೀಸರು ಮೂರು ತಂಡಗಳನ್ನು ರಚಿಸಿ ಬಲೆ ಬೀಸಿದ್ದರು. ಅದರಂತೆ ಇದೀಗ ಬಂಧಿಸಲಾಗಿದೆ. ಸದ್ಯ ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ

- Advertisement -

Latest News

error: Content is protected !!