Saturday, June 6, 2026
Homeಕರಾವಳಿಉಡುಪಿಉಡುಪಿ: ಮಾದಕ ವಸ್ತು ಸೇವನೆ ಪ್ರಕರಣ: 13 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

ಉಡುಪಿ: ಮಾದಕ ವಸ್ತು ಸೇವನೆ ಪ್ರಕರಣ: 13 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

- Advertisement -
- Advertisement -

ಉಡುಪಿ:ಜಿಲ್ಲೆಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣ ಸಂಬಂಧ  13 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಶ್ ಶರ್ಮಾ(19), ಪ್ರಥಮೇಶ್ ಬಿ. ಪೈ (20), ರೋಹನ್ ಖ್ಯಾನಿ (20), ಯಶ್ ಮಯೂರ್ ದೋಶಿ (20), ಯಶ್ ಇಶ್ರಿತ್ ತಿನ್ನೇವಾಲ್ (20), ಕೊಮ್ಮುರಿ ಸಿದ್ದಿ ಸುಹಾಸ್ (20), ಪ್ರನೀತ್ ನರಪರಾಜು (21), ಏಕಾನ್ಸ್ ರೋಹಿತ್ ಅಗಾಲ್ (21), ಆದರ್ಶ್ ಮೋಹನ್ (21), ವೇದಾಂತ್ ಶೆಟ್ಟಿ (20), ಷಬ್‌ಜೋತ್ ಸಂಧು (21), ಎಂಬುವರನ್ನು ಹಾಗೂ ಉಡುಪಿ ಸೆನ್ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ಮಂಜುನಾಥ ಅವರು ಇತರ ಸಿಬ್ಬಂದಿಗಳೊಂದಿಗೆ ಹೆರ್ಗ ಗ್ರಾಮದ ಸರಳಬೆಟ್ಟು ಕೊಡಂಗೆಟ್ಟಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮನುಕೃಷ್ಣನ್ (21), ವಿಷ್ಣು ಬಾಬುರಾಜ್ (20) ಎಂಬ ಇಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಇವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ 11 ಹಾಗೂ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಸೇರಿ ಒಟ್ಟು 13 ಮಾದಕ ವಸ್ತು ಸೇವನೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!