Saturday, June 6, 2026
Homeತಾಜಾ ಸುದ್ದಿಮಸೀದಿಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ಮಸೀದಿಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

- Advertisement -
- Advertisement -

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ದೆಹಲಿ ಮಸೀದಿಯಲ್ಲಿ ಮುಸ್ಲಿಂ ಮುಖಂಡರು ಹಾಗೂ ಧರ್ಮಗುರುಗಳೊಂದಿಗೆ ಸಭೆ ನಡೆಸಿದರು.

ಮೋಹನ್ ಭಾಗವತ್ ಅವರಿಂದು ಮಸೀದಿಯೊಂದಕ್ಕೆ ತೆರಳಿ ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದರು. ಕಸ್ತೂರ ಬಾ ಗಾಂಧಿ ಮಾರ್ಗದಲ್ಲಿನ ಮಸೀದಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ನಡೆದ ರಹಸ್ಯ ಸಭೆಯಲ್ಲಿ ಹಲವು ವಿಚಾರಗಳು ಕುರಿತಂತೆ ಚರ್ಚೆ ನಡೆಸಿದರು.

ಸಭೆಯ ವಿವರಗಳನ್ನು ಹಂಚಿಕೊಂಡಿರುವ ಇಲ್ಯಾಸಿ ಸಹೋದರ ಸುಹೈಲ್ ಇಲ್ಯಾಸಿ, ನಮ್ಮ ತಂದೆಯ ಪುಣ್ಯ ಸ್ಮರಣೆ ಸಂದರ್ಭದಲ್ಲಿ ತಮ್ಮ ಆಹ್ವಾನದ ಮೇರೆಗೆ ಭಾಗವತ್ ಬಂದದ್ದು, ಪ್ರಮುಖ ವಿಚಾರವಾಗಿದೆ. ಅಲ್ಲದೇ ಇದು ದೇಶಕ್ಕೆ ಒಳ್ಳೆಯ ಸಂದೇಶ ಕಳುಹಿಸಲಿದೆ ಎಂದು ತಿಳಿಸಿದರು.

- Advertisement -

Latest News

error: Content is protected !!