ಬೆಂಗಳೂರು : ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ನಟಿ ಚಂದನಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಿನೇಶ್ ರನ್ನ ಸದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ನಟಿ ಚಂದನಾಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧನ ಮಾಡಲಾಗಿದೆ. ಕಳೆದ ಮೇ 28ರಂದು ವಿಷ ಕುಡಿದು ಸೆಲ್ಪಿ ವಿಡಿಯೋ ಮಾಡಿ ನಟಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ಜೂ.1ನೇ ತಾರಿಕಿನಂದು ಚಂದನಾ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದರು . ಈ ವೇಳೆ ಮಾಡಿಕೊಂಡ ಸೆಲ್ಫಿ ವೀಡಿಯೋದಲ್ಲಿ ದಿನೇಶ್ ನನಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದರು. ಯುವತಿಗೆ ಮೋಸ ಮಾಡಿದ ಆರೋಪದ ಹಿನ್ನಲೆ ದಿನೇಶ್ನನ್ನು ಬಂಧಿಸಲಾಗಿದ್ದು, ವಿಚಾರಣೆ ಆರಂಭಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ದಿನೇಶ್ ಜೊತೆ ಚಂದನಾ ಪ್ರೀತಿಯಲ್ಲಿದ್ದರು. ಅಲ್ಲದೆ, ಮದುವೆ ಆಗುವ ನಿರ್ಧಾರವನ್ನು ಕೂಡ ತೆಗೆದುಕೊಂಡಿದ್ದರು.ಇನ್ನು, ಮದುವೆ ಆಗುವುದಾಗಿ ನಂಬಿಸಿ ಚಂದನಾ ಜೊತೆ ಈತ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಇನ್ನು, ಐದು ಲಕ್ಷ ಹಣ ಪಡೆದು ದಿನೇಶ್ ವಂಚಿಸಿದ್ದ ಎಂದು ಚಂದನಾ ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಹೀಗಾಗಿ, ಚಂದನಾ ಕುಟುಂಬದವರು ಪೊಲೀಸ್ ಠಾಣೆಗೆ ದಿನೇಶ್ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ನಟಿ ಚಂದನಾ ಆತ್ಮಹತ್ಯೆ : ಆರೋಪಿ ಪ್ರಿಯಕರ ದಿನೇಶ್ ಅರೆಸ್ಟ್
- Advertisement -
![]()
- Advertisement -
- Advertisement -


