Thursday, June 4, 2026
Homeತಾಜಾ ಸುದ್ದಿವಿಧಾನ ಪರಿಷತ್‍ನಲ್ಲಿಂದು ಬಹು ನಿರೀಕ್ಷಿತ ಮತಾಂತರ ನಿಷೇಧ ವಿಧೇಯಕ ಮಂಡನೆ

ವಿಧಾನ ಪರಿಷತ್‍ನಲ್ಲಿಂದು ಬಹು ನಿರೀಕ್ಷಿತ ಮತಾಂತರ ನಿಷೇಧ ವಿಧೇಯಕ ಮಂಡನೆ

- Advertisement -
- Advertisement -

ಬೆಂಗಳೂರು: ಬಹು ನಿರೀಕ್ಷಿತ ಮತಾಂತರ ನಿಷೇಧ ವಿಧೇಯಕ ಇಂದು ವಿಧಾನ ಪರಿಷತ್ ನಲ್ಲಿ ಮಂಡನೆಯಾಗಲಿದೆ. ಪ್ರಶ್ನೋತ್ತರ ಕಲಾಪದ ಬಳಿಕ ಸದನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿದೆ. ಇನ್ನೂ ಇಂದು ಮಂಡನೆಯಾಗಲಿರುವ ಮಸೂದೆಗೆ ಬಿಜೆಪಿ ನಾಯಕರುಗಳು ಸದನದಲ್ಲಿ ಯಾವೆಲ್ಲ ರೀತಿಯಲ್ಲಿ ನಮ್ಮ ವಿಧೆಯಕವನ್ನು ಸಮರ್ಥನೆ ಮಡಿಕೊಳ್ಳಬೇಕು ಎಂಬ ಬಗ್ಗೆ ಈಗಗಾಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇತ್ತ ಇಂದು ಸದನದಲ್ಲಿ ಮತಾಂತರ ಮಸೂದೆ ಮಂಡನೆಯಾಗಲಿದೆ ಎನ್ನುವ ಬೆನ್ನಲೇ ನಿನ್ನೆ ರಾತ್ರಿ ಚಾಮರಾಜಪೇಟೆಯ ಕೇಶವಾಕೃಪಾದಲ್ಲಿ ಸಭೆ ನಡೆಸಿ ಮಹತ್ವ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಪ್ರಸ್ತುತ ವಿಧಾನ ಪರಿಷತ್‍ನಲ್ಲಿ ಬಿಜೆಪಿಯ 41 ಸದಸ್ಯರಿದ್ದಾರೆ. ಕಾಂಗ್ರೆಸ್‍ನ 26 ಮತ್ತು ಜೆಡಿಎಸ್‍ನ 8 ಸದಸ್ಯರಿದ್ದಾರೆ. ಹೀಗಾಗಿ ಈ ಬಾರಿ ಪರಿಷತ್‌ನಲ್ಲಿ ಮಸೂದೆ ಪಾಸಾಗಲಿದೆ ಎನ್ನಲಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ.

- Advertisement -

Latest News

error: Content is protected !!