Friday, April 26, 2024
Homeತಾಜಾ ಸುದ್ದಿದಕ್ಷಿಣ ಕನ್ನಡ: ಸರ್ಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿ: ಜಿಲ್ಲೆಯ 42 ಶಾಲೆಗಳಿಗೆ ಮುಚ್ಚುವ ಭೀತಿ

ದಕ್ಷಿಣ ಕನ್ನಡ: ಸರ್ಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿ: ಜಿಲ್ಲೆಯ 42 ಶಾಲೆಗಳಿಗೆ ಮುಚ್ಚುವ ಭೀತಿ

spot_img
- Advertisement -
- Advertisement -

ದಕ್ಷಿಣ ಕನ್ನಡ: ಮೂಲಭೂತ ಸೌಕರ್ಯಗಳ ಕೊರತೆ, ಆಂಗ್ಲ ಮಾಧ್ಯಮ ಶಾಲೆಗಳತ್ತ ಹೆಚ್ಚಿದ ಒಲವು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಹೀಗಾಗಿ ಆ 42 ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಭಾಗದ 8 ಶಾಲೆಗಳು, ಬೆಳ್ತಂಗಡಿ ವಿಭಾಗದ 2, ಮಂಗಳೂರು ನಾರ್ಥ ವಿಭಾಗದ 12, ಮಂಗಳೂರು ಸೌತ್ ವಿಭಾಗದ 9, ಮೂಡಬಿದ್ರೆ ವಿಭಾಗದ 6, ಪುತ್ತೂರು ವಿಭಾಗದ 4 ಮತ್ತು ಸುಳ್ಯ ವಿಭಾಗದ 1 ಶಾಲೆಯಲ್ಲಿ ಶೂನ್ಯ ದಾಖಲಾತಿ ಇದೆ.

2021-22 ಮತ್ತು 2022-23 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ ಒಟ್ಟು 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇರೋದ್ರಿಂದ ಈ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ.

- Advertisement -
spot_img

Latest News

error: Content is protected !!