Saturday, June 6, 2026
Homeಕರಾವಳಿಉಡುಪಿಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಭಕ್ತರಿಗೆ ಹಂಚಲು ಲಕ್ಷಾಂತರ ಚಕ್ಕುಲಿ ತಯಾರಿ

ಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಭಕ್ತರಿಗೆ ಹಂಚಲು ಲಕ್ಷಾಂತರ ಚಕ್ಕುಲಿ ತಯಾರಿ

- Advertisement -
- Advertisement -

ಉಡುಪಿ: ಕೃಷ್ಣ ನಗರಿಯಲ್ಲಿಂದು ಕೃಷ್ಣ ಜನ್ಮಾಷ್ಠಮಿ ಸಂಭ್ರಮ. ಈ ಪ್ರಯುಕ್ತ ಇಂದು ನಡುರಾತ್ರಿ 11:54ಕ್ಕೆ ಶ್ರೀ ಕೃಷ್ಣದೇವರಿಗೆ ಅರ್ಘ್ಯ ಪ್ರಧಾನ ನಡೆಯಲಿದೆ. ದಿನವಿಡೀ ಉಪವಾಸವಿರುವ ಭಕ್ತರು ಬಗೆ ಬಗೆಯ ನೈವೇದ್ಯಗಳನ್ನು ಕೃಷ್ಣದೇವರಿಗೆ ಈ ವೇಳೆ ಅರ್ಪಿಸಿ ಮರುದಿನ ಶ್ರೀ ಕೃಷ್ಣ ಲೀಲೋತ್ಸವದಲ್ಲಿ ಭಾಗಿಯಾಗುತ್ತಾರೆ.

ನಾಳೆ ವಿಟ್ಲಪಿಂಡಿ ಉತ್ಸವದ ವೇಳೆ ಭಕ್ತರಿಗೆ ಹಂಚಲು ಲಕ್ಷಾಂತರ ಉಂಡೆ ಚಕ್ಕುಲಿಗಳ ತಯಾರಿ ನಡೆಯುತ್ತಿದೆ. ಕಡಗೋಲು ಕೃಷ್ಣನ ದರ್ಶನಕ್ಕೆ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಲಿದ್ದು, ರಥ ಬೀದಿಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.

- Advertisement -

Latest News

error: Content is protected !!