Monday, April 29, 2024
Homeಉತ್ತರ ಕನ್ನಡಮನೆಯಲ್ಲಿಟ್ಟಿದ್ದ ಗುಡ್ ನೈಟ್ ಲಿಕ್ವಿಡ್ ಕುಡಿದು ಮಗು ಸಾವು

ಮನೆಯಲ್ಲಿಟ್ಟಿದ್ದ ಗುಡ್ ನೈಟ್ ಲಿಕ್ವಿಡ್ ಕುಡಿದು ಮಗು ಸಾವು

spot_img
- Advertisement -
- Advertisement -

ಉತ್ತರ ಕನ್ನಡ: ಮನೆಯಲ್ಲಿಟ್ಟಿದ್ದ ಗುಡ್‌ ನೈಟ್‌ ಲಿಕ್ವಿಡ್‌ ಕುಡಿದು ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ.

ಮಹೇಶ್ ನಾಯ್ಕ್ ಹಾಗೂ ಶಿಲ್ಪ ದಂಪತಿಯ 2 ವರ್ಷದ ಮಗು ಕುಮಾರ್ ಆರವ್ ಮಹೇಶ ನಾಯ್ಕ (2) ಸಾವಿಗೀಡಾಗಿರುವ ಮಗು. ನೆಲದ ಮೇಲೆ ಇಟ್ಟಿದ್ದ ಆಲ್‌ ಔಟ್ ಮಸ್ಕಿಟೋ ಲಿಕ್ವಿಡ್ ಅನ್ನು ಕುಡಿದಿದ್ದ. ಮಗು ಅಸ್ವಸ್ಥಗೊಂಡಿರುವುದನ್ನು ಕಂಡು ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 2 ವರ್ಷದ ಮಗು ಆರವ್ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

- Advertisement -
spot_img

Latest News

error: Content is protected !!