Monday, April 29, 2024
Homeತಾಜಾ ಸುದ್ದಿ10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ : ರಾಷ್ಟ್ರಾಧ್ಯಕ್ಷರಿಂದ ತಾಯಂದಿರಿಗೆ ವಿಶೇಷ ಆಫರ್..!

10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ : ರಾಷ್ಟ್ರಾಧ್ಯಕ್ಷರಿಂದ ತಾಯಂದಿರಿಗೆ ವಿಶೇಷ ಆಫರ್..!

spot_img
- Advertisement -
- Advertisement -

ಇಡೀ ಜಗತ್ತೇ ಜನಸಂಖ್ಯೆ ಕಡಿಮೆ ಮಾಡಿಕೊಳ್ಳುವ ಕುರಿತು ತಲೆಬಿಸಿಯಲ್ಲಿದ್ದರೆ ರಷ್ಯಾ ಮಾತ್ರ ಪಕ್ಕಾ ಉಲ್ಟಾ ಯೋಚನೆ ಮಾಡುತ್ತಿದೆ. ರಷ್ಯಾ ದೊಡ್ಡ ದೇಶವಾದರೂ ಅಲ್ಲಿ ಜನಸಂಖ್ಯೆ ಬಹಳ ಕಡಿಮೆ. ಈ ಕಾರಣಕ್ಕಾಗಿಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೊಸ ಆಫರ್ ಘೋಷಿಸಿದ್ದಾರೆ. 10 ಅಥವಾ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ 1 ಮಿ. ರೂಬಲ್ಸ್ (13,07,898 ರೂ.) ಕ್ಯಾಶ್ ಕೊಡುವುದಾಗಿ ಹೇಳಿದ್ದಾರೆ.

ಉಕ್ರೇನ್ ಜತೆ ಯುದ್ಧ, ಕೊರೋನಾದಿಂದಾಗಿ ರಷ್ಯಾದಲ್ಲಿ ಜನಸಂಖ್ಯೆ ಕುಸಿದಿದೆ. ಭಾರತಕ್ಕೆ ಹೋಲಿಸಿದರೆ ರಷ್ಯಾ 6 ಪಟ್ಟು ದೊಡ್ಡದು. ಅಲ್ಲಿನ ಜನಸಂಖ್ಯೆ ಮಾತ್ರ 14.47 ಕೋಟಿ. 2021ಕ್ಕೆ ಹೋಲಿಸಿದರೆ ಶೇ. 0.27 ಕಡಿಮೆ. ಈ ಯೋಜನೆಗೆ ‘ಮದರ್ ಹೀರೋಯಿನ್’ ಎಂದು ಹೆಸರಿಡಲಾಗಿದೆ.

10ನೇ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬದಂದು 13 ಲಕ್ಷ ಹಣವನ್ನು ರಷ್ಯಾ ಸರ್ಕಾರ ನೀಡಲಿದೆ. ಜೊತೆಗೆ ಉಳಿದ 9 ಮಕ್ಕಳು ಬದುಕಿರಬೇಕು ಎಂಬ ನಿಯಮವನ್ನೂ ಮಾಡಲಾಗಿದೆ. ಆದರೆ ಈ ಯೋಜನೆಯನ್ನು ವ್ಲಾದಿಮಿರ್ ಪುಟಿನ್ ಸರ್ಕಾರದ ಹತಾಶ ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

- Advertisement -
spot_img

Latest News

error: Content is protected !!