Friday, June 5, 2026
Homeತಾಜಾ ಸುದ್ದಿಉಳ್ಳಾಲ: ಮುಸ್ಲಿಂ ಮುಖಂಡನಿಂದಲೇ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ: ಅರ್ಧ ಗಂಟೆಯಲ್ಲೇ ಪೊಲೀಸರಿಂದ ಫ್ಲೆಕ್ಸ್‌ ತೆರವು

ಉಳ್ಳಾಲ: ಮುಸ್ಲಿಂ ಮುಖಂಡನಿಂದಲೇ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ: ಅರ್ಧ ಗಂಟೆಯಲ್ಲೇ ಪೊಲೀಸರಿಂದ ಫ್ಲೆಕ್ಸ್‌ ತೆರವು

- Advertisement -
- Advertisement -

ಉಳ್ಳಾಲ: ಉಳ್ಳಾಲದ ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ ಮುಸ್ಲಿಂ ಮುಖಂಡರೊಬ್ಬರು ಸಾವರ್ಕರ್ ಪರವಾಗಿ ಪ್ಲೆಕ್ಸ್ ಹಾಕಿದ್ದು ಪೊಲೀಸರು ಫ್ಲೆಕ್ಸ್‌ ತೆರವುಗೊಳಿಸಿದ್ದಾರೆ.

ಶಾಸಕ ಯುಟಿ ಖಾದರ್ ಪ್ರತಿನಿಧಿಸುತ್ತಿರುವ ಮುಸ್ಲಿಂ ಬಾಹುಳ್ಯದ ಮಂಗಳೂರು ವಿಧಾನಸಭಾ ಕ್ಷೇತ್ರದ ಎರಡು ಕಡೆ ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಲಾಗಿತ್ತು.. ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ ಬೃಹತ್ ಪೋಸ್ಟರ್ ಹಾಕಿದ್ದು, ಸಾವರ್ಕರ್ ಅವರಿಗೆ ನಮನಗಳು ಎಂದು ಬರೆದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಆರ್. ಫಝಲ್ ಅವರು ಫ್ಲೆಕ್ಸ್ ಹಾಕಿದ್ರು. ಫ್ಲೆಕ್ಸ್‌ ಹಾಕಿದ ಅರ್ಧ ಗಂಟೆಯಲ್ಲೇ ಕೊಣಾಜೆ ಪೊಲೀಸರು ದೇರಳಕಟ್ಟೆಯಲ್ಲಿ ಹಾಕಿದ್ದ ಫ್ಲೆಕ್ಸ್‌ ನ ತೆರವು ಮಾಡಿದ್ದಾರೆ.

- Advertisement -

Latest News

error: Content is protected !!