Thursday, June 4, 2026
Homeತಾಜಾ ಸುದ್ದಿಖ್ಯಾತ ತೆಲುಗು ನಟ, ಎನ್‌ಟಿಆರ್ ಪುತ್ರಿ ಆತ್ಮಹತ್ಯೆ

ಖ್ಯಾತ ತೆಲುಗು ನಟ, ಎನ್‌ಟಿಆರ್ ಪುತ್ರಿ ಆತ್ಮಹತ್ಯೆ

- Advertisement -
- Advertisement -

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌.ಟಿ. ರಾಮಾ ರಾವ್ (NTR) ಅವರ ಪುತ್ರಿ ಕಾಂತಮನೇನಿ ಉಮಾ ಮಹೇಶ್ವರಿ ಅವರು ಇಂದು (ಆಗಸ್ಟ್ 1) ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಬಾದ್‌ನಲ್ಲಿನ ತಮ್ಮ ಮನೆಯಲ್ಲಿ ಕಾಂತಮನೇನಿ ಉಮಾ ಮಹೇಶ್ವರಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಮಾ ಮಹೇಶ್ವರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ಕಾಲದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಅನಾರೋಗ್ಯದಿಂದಾಗಿ ಖಿನ್ನತೆಗೆ ಒಳಗಾಗಿದ್ದ ಉಮಾ ಮಹೇಶ್ವರಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Latest News

error: Content is protected !!