Thursday, June 4, 2026
Homeಕೊಡಗುಸಂಬಂಧಿಕರ ಮನೆಗೆ ತೆರಳುವಾಗ ದಾರಿತಪ್ಪಿ ಕಾಡು ಪಾಲಾದ ಅಜ್ಜಿ: ನಾಲ್ಕು ದಿನಗಳ ಕಾಲ ಪೊದೆಯಲ್ಲೇ ಆಶ್ರಯ

ಸಂಬಂಧಿಕರ ಮನೆಗೆ ತೆರಳುವಾಗ ದಾರಿತಪ್ಪಿ ಕಾಡು ಪಾಲಾದ ಅಜ್ಜಿ: ನಾಲ್ಕು ದಿನಗಳ ಕಾಲ ಪೊದೆಯಲ್ಲೇ ಆಶ್ರಯ

- Advertisement -
- Advertisement -

ಮಡಿಕೇರಿ: ಬೆಟ್ಟದ ಮೇಲಿನ‌ ಪೊದೆಯಲ್ಲಿ ನಾಲ್ಕು ದಿನಗಳ ಕಾಲ ವೃದ್ಧೆಯೊಬ್ಬರು ಸಿಲುಕಿ ಹಾಕಿಕೊಂಡಿದ್ದ ಘಟನೆ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಗ್ರಾಮದಲ್ಲಿ ನಡೆದಿದೆ. ನಾಲ್ಕು ದಿನಗಳ ಕಾಲ‌ ಪೊದೆಯಲ್ಲೇ ಆಶ್ರಯ ಪಡೆದಿದ್ದ 80 ವರ್ಷದ ಅಜ್ಜಿ ಸೀತಮ್ಮ ರಕ್ಷಿಸಲ್ಪಟ್ಟಿದ್ದಾರೆ.

ಸಂಬಂಧಿಕರ‌ ಮನೆಗೆ ತೆರಳುತ್ತಿದ್ದಾಗ ಸೀತಮ್ಮ ದಾರಿ ತಪ್ಪಿ ಕಾಡು ಪಾಲಾಗಿದ್ದು, ಕುಟುಂಬಸ್ಥರಿಂದ ನಾಲ್ಕು ದಿನಗಳ‌ ಕಾಲ ಹುಡುಕಾಟ ನಡೆದಿದೆ.

ಮನೆಯಿಂದ‌ 2 ಕಿಲೋ ಮೀಟರ್ ದೂರದ ಬೆಟ್ಟದ ಮೇಲಿನ ಕಾಡಿನಲ್ಲಿ ಇಂದು ಪತ್ತೆಯಾಗಿದ್ದು, ಅಸ್ವಸ್ಥಗೊಂಡಿದ್ದ ಸೀತಮ್ಮ ಅವರಿಗೆ ನಾಪೋಕ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

- Advertisement -

Latest News

error: Content is protected !!