Saturday, June 13, 2026
Homeತಾಜಾ ಸುದ್ದಿಶಿರಾಡಿಘಾಟ್ ನಲ್ಲಿ ಮತ್ತೆ ಭೂ ಕುಸಿತ:  ಭಾರಿ ವಾಹನ ಸಂಚಾರ ನಿಷೇಧ

ಶಿರಾಡಿಘಾಟ್ ನಲ್ಲಿ ಮತ್ತೆ ಭೂ ಕುಸಿತ:  ಭಾರಿ ವಾಹನ ಸಂಚಾರ ನಿಷೇಧ

- Advertisement -
- Advertisement -

ಹಾಸನ:  ಶಿರಾಢಿಘಾಟ್ ನಲ್ಲಿ ಮತ್ತೆ ಭೂ ಕುಸಿತವಾಗಿದ್ದು, ಭಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ರಸ್ತೆ ಕುಸಿತವಾಗಿದೆ.ವಾರದ ಹಿಂದೆ ಅಲ್ಪ ಪ್ರಮಾಣದಲ್ಲಿ ರಸ್ತೆ ಕುಸಿದಿತ್ತು. ರಸ್ತೆ ಕುಸಿದ ಸ್ಥಳಕ್ಕೆ ಲೋಕೋಪಯೋಗಿ ಸಚಿವರು ಭೇಟಿ ಪರಿಶೀಲನೆ‌ ನಡೆಸಿದ್ರು.

ಸಚಿವರು ಭೇಟಿ ನೀಡಿದ ನಾಲ್ಕೇ ದಿನಕ್ಕೆ ಮತ್ತೆ ಭೂ ಕುಸಿತವಾಗಿದೆ. ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ರಸ್ತೆ ಕುಸಿದಿತ್ತು.ಇಂದು ಮದ್ಯಾಹ್ನದ ವೇಳೆಗೆ ಮತ್ತೆ ಭೂ ಕುಸಿತ ಹಿನ್ನೆಲೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಲಘು ವಾಹನಗಳನ್ನು ಏಕ ಮುಖ ಸಂಚಾರದಂತೆ ಚಲಿಸಲು ಅವಕಾಶ ಅಧಿಕಾರಿಗಳು ಅವಕಾಶ ನೀಡಿದ್ದಾರೆ.
ಮಳೆ ಹೆಚ್ಚಾಗಿರೊ ಹಿನ್ನೆಲೆಯಲ್ಲಿ ಮತ್ತೆ ಕುಸಿಯುವ ಭೀತಿ ಹಿನ್ನೆಲೆ ವಾಹನ‌ ಸಂಚಾರ ನಿಷೇಧಿಸಲಾಗಿದೆ.

- Advertisement -

Latest News

error: Content is protected !!