Thursday, June 4, 2026
Homeಕರಾವಳಿಉಡುಪಿಮರವಂತೆ ಬೀಚ್ ಗೆ ಬಿದ್ದ ಕಾರು: ಓರ್ವ ಸಾವು : ಇನ್ನೋರ್ವ ನಾಪತ್ತೆ

ಮರವಂತೆ ಬೀಚ್ ಗೆ ಬಿದ್ದ ಕಾರು: ಓರ್ವ ಸಾವು : ಇನ್ನೋರ್ವ ನಾಪತ್ತೆ

- Advertisement -
- Advertisement -

ಕುಂದಾಪುರ : ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಿಂದ ಕಾರು ಸಮುದ್ರಕ್ಕೆ ಬಿದ್ದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ‌.

ಕಾರಿನಲ್ಲಿ ನಾಲ್ವರಿದ್ದು, ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಇಬ್ಬರು ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದ ಕೋಟೇಶ್ವರ ಬಳಿಯಿಂದ ಬೈಂದೂರು ಕಡೆಗೆ ಕಾರು ತೆರಳುತ್ತಿತ್ತು ಎನ್ನಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಕಾರನ್ನು ಮೇಲಕ್ಕೆತ್ತುವ ಕಾರ್ಯಚರಣೆ ಕೈಗೊಂಡಿದ್ದಾರೆ‌.‌ ಗಂಗೊಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ‌.

- Advertisement -

Latest News

error: Content is protected !!