Saturday, June 6, 2026
Homeಕರಾವಳಿಬಂಟ್ವಾಳ: 4 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಹೈದರಾಬಾದ್‌ನಲ್ಲಿ ಪತ್ತೆ

ಬಂಟ್ವಾಳ: 4 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಹೈದರಾಬಾದ್‌ನಲ್ಲಿ ಪತ್ತೆ

- Advertisement -
- Advertisement -

ಬಂಟ್ವಾಳ: ನಾಲ್ಕು ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಹೈದರಾಬಾದ್‌ನಲ್ಲಿ ಪತ್ತೆಯಾದ ಘಟನೆ ನಡೆದಿದೆ.


ಸಜೀಪ ಮುನ್ನೂರು ಗ್ರಾಮದ ಇಂದಿರಾ ನಗರ ನಿವಾಸಿ ತಿಲಕ್ (28) ಪತ್ತೆಯಾದ ಯುವಕ. ಇವರು 2019ರ ಮೇ 4 ರಂದು ಕಾಣೆಯಾಗಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡು ಮಾಹಿತಿ ಸಂಗ್ರಹ ಮಾಡಿದಾಗ ತಿಲಕ್ ಹೈದ್ರಾಬಾದ್ ನಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಮಾಹಿತಿ ಆಧಾರದ ಮೇಲೆ ಹೈದರಾಬಾದ್‌ಗೆ ವಿಶೇಷ ಕರ್ತವ್ಯದಲ್ಲಿ ಪೊಲೀಸ್ ಸಿಬ್ಬಂದಿ ಗಣೇಶ್ ಅವರು ತೆರಳಿ ತಿಲಕ್ ಅವರನ್ನು ಕರೆತಂದು ಸಹೋದರ ದೀಪಕ್ ಅವರೊಂದಿಗೆ ಪೊಲೀಸರ ಸಮ್ಮುಖದಲ್ಲಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

- Advertisement -

Latest News

error: Content is protected !!