Saturday, June 6, 2026
Homeತಾಜಾ ಸುದ್ದಿಕೇರಳಕ್ಕೆ ಲಗ್ಗೆ ಇಟ್ಟ ಹೊಸ ಸಾಂಕ್ರಾಮಿಕ ರೋಗ:‌ ಇಬ್ಬರು ಮಕ್ಕಳಲ್ಲಿ ನೊರೊ ವೈರಸ್ ದೃಢ

ಕೇರಳಕ್ಕೆ ಲಗ್ಗೆ ಇಟ್ಟ ಹೊಸ ಸಾಂಕ್ರಾಮಿಕ ರೋಗ:‌ ಇಬ್ಬರು ಮಕ್ಕಳಲ್ಲಿ ನೊರೊ ವೈರಸ್ ದೃಢ

- Advertisement -
- Advertisement -

ತಿರುವನಂತಪುರಂ: ಕೇರಳದಲ್ಲಿ ಹೊಸ ವೈರಸ್ ಕಾಣಿಸಿಕೊಂಡಿದ್ದು, ಇಬ್ಬರು ವಿದ್ಯಾರ್ಥಿಗಳಲ್ಲಿ ಹೊಸ ಸೋಂಕು ಕಂಡುಬಂದಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.

ತಿರುವನಂತಪುರಂನ ವಿಝಿಂಜಮ್‌ನಲ್ಲಿ ಫುಡ್ ಪಾಯ್ಸನ್ ಆಗಿ, ಹೊಟ್ಟೆನೋವು, ವಾಂತಿ, ಬೇಧಿಯಿಂದ ಬಳಲುತ್ತಿದ್ದ ಈ ಇಬ್ಬರು ಮಕ್ಕಳನ್ನು ತಪಾಸಣೆಗೊಳಪಡಿಸಲಾಗಿತ್ತು. ಇಬ್ಬರನ್ನು ಹೊಸ ಸೋಂಕು ನೊರೊವೈರಸ್‌ ದೃಢವಾಗಿದೆ. ಇದೂ ಕೂಡ ಸಾಂಕ್ರಾಮಿಕ ರೋಗದ ವೈರಸ್‌ಗಳೆಂದು ವೈದ್ಯರು ಹೇಳಿದ್ದಾರೆ.

ಸದ್ಯ ಈ ಬಗ್ಗೆ ವರದಿ ನೀಡುವಂತೆ ಕೇರಳ ಆರೋಗ್ಯ ಸಚಿ ವೀಣಾ ಜಾರ್ಜ್ ಸೂಚಿಸಿದ್ದು, ನಾಗರಿಕರು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.ಇ ದು ಸಾಂಕ್ರಾಮಿಕ ರೋಗವಾಗಿರುವುದರಿಂದ ಅತಿ ವೇಗವಾಗಿ ಹರಡುವ ಸಾಧ್ಯತೆ ಇದ್ದು, ಕೂಡಲೇ ಜನರು ಎಚ್ಚೆತ್ತುಕೊಂಡು ಸಹಕರಿಸಬೇಕೆಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!