Sunday, May 19, 2024
Homeತಾಜಾ ಸುದ್ದಿವಾರಣಾಸಿ ಬಾಂಬ್ ಸ್ಪೋಟ ಪ್ರಕರಣ: 16 ವರ್ಷದ ನಂತರ ಅಪರಾಧಿಗೆ ಗಲ್ಲು ಶಿಕ್ಷೆ ಪ್ರಕಟ

ವಾರಣಾಸಿ ಬಾಂಬ್ ಸ್ಪೋಟ ಪ್ರಕರಣ: 16 ವರ್ಷದ ನಂತರ ಅಪರಾಧಿಗೆ ಗಲ್ಲು ಶಿಕ್ಷೆ ಪ್ರಕಟ

spot_img
- Advertisement -
- Advertisement -

2006 ರ ವಾರಣಾಸಿ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ವಲಿಯುಲ್ಲಾ ಖಾನ್‌ಗೆ ಗಾಜಿಯಾಬಾದ್ ನ್ಯಾಯಾಲಯವು ಸೋಮವಾರ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಸ್ಫೋಟ ನಡೆದು 16 ವರ್ಷಗಳ ನಂತರ ತೀರ್ಪು ಪ್ರಕಟಿಸಲಾಗಿದೆ. 2006 ರ ವಾರಣಾಸಿ ಸರಣಿ ಬಾಂಬ್ ಸ್ಫೋಟದಲ್ಲಿ  ಕನಿಷ್ಠ 20 ಜನರು ಸಾವನ್ನಪ್ಪಿದ್ದರು. ಜೊತೆಗೆ ಸುಮಾರು 100 ಜನರು ಗಾಯಗೊಂಡಿದ್ದರು. ಮಾರ್ಚ್ 7, 2006 ರಂದು ಉತ್ತರ ಪ್ರದೇಶದ ವಾರಣಾಸಿಯ ಸಂಕಟ್ ಮೋಚನ್ ದೇವಸ್ಥಾನ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದವು.

ಶನಿವಾರ, ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಅವರು ವಲಿಯುಲ್ಲಾನನ್ನು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಕೊಲೆ ಯತ್ನ ಮತ್ತು ವಿರೂಪಗೊಳಿಸುವಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ದಾಖಲಿಸಲಾದ ಎರಡು ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ.

ವಾಲಿವುಲ್ಲಾ ಲಂಕಾ ಪೊಲೀಸ್ ಠಾಣೆ ಮತ್ತು ದಶಾಶ್ವಮೇಧ್ ಪೊಲೀಸ್ ಠಾಣೆಗಳಲ್ಲಿ ವಾರಣಾಸಿಯ ಸರ್ಕಾರಿ ರೈಲ್ವೆ ಪೊಲೀಸ್ ಆವರಣದಲ್ಲಿ ದಾಖಲಾಗಿರುವ ಆರು ಪ್ರಕರಣಗಳಲ್ಲಿ ಪ್ರಕರಣ ದಾಖಲಾಗಿತ್ತು.

.

- Advertisement -
spot_img

Latest News

error: Content is protected !!