Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಚಾರ್ಜಿಂಗ್ ವೇಳೆ ಬೆಂಕಿಗಾಹುತಿಯಾದ ಎಲೆಕ್ಟ್ರಿಕ್ ಸ್ಕೂಟರ್

ಮಂಗಳೂರಿನಲ್ಲಿ ಚಾರ್ಜಿಂಗ್ ವೇಳೆ ಬೆಂಕಿಗಾಹುತಿಯಾದ ಎಲೆಕ್ಟ್ರಿಕ್ ಸ್ಕೂಟರ್

- Advertisement -
- Advertisement -

ಮಂಗಳೂರು: ಬ್ಯಾಟರಿ ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ ಹತ್ತಿಕೊಂಡು ಸುಟ್ಟು ಹೋದ ಘಟನೆ ಮಂಗಳೂರಿನ ಬೋಂದೆಲ್ ನ ಕೆಹೆಚ್ ಬಿ ಕಾಲೋನಿಯಲ್ಲಿ ನಡೆದಿದೆ.

ಜಯರಾಮ್ ಎಂಬವರಿಗೆ ಕೊಮಾಕಿ ಕಂಪನಿಯ ಸ್ಕೂಟರ್ ಬ್ಯಾಟರಿ ಚಾರ್ಜ್ ಗೆ ಇಟ್ಟಿದ್ದ ವೇಳೆ ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿದೆ. ಸ್ಕೂಟರ್ ಸಮೀಪ ಕಾರು ನಿಲ್ಲಿಸಲ್ಪಟ್ಟಿದ್ದು ಅದೃಷ್ಟವಶಾತ್ ಕಾರಿಗೆ ಯಾವುದೇ ಹಾನಿ ಸಂಭವಿಸಿಲ್ಲ.

ಮೂರು ತಿಂಗಳ ಹಿಂದಷ್ಟೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲಾಗಿದ್ದು, ಬೆಂಕಿ ಹತ್ತಿಕೊಂಡ ಖಚಿತ ಕಾರಣ ತಿಳಿಯಲು ಕೊಮಾಕಿ ಕಂಪನಿಯ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!