- Advertisement -
![]()
- Advertisement -
ತುಮಕೂರು: ಡಾಂಬರು ಡ್ರಮ್ ಸಿಡಿದು ಆಟೋದಲ್ಲಿ ತೆರಳುತ್ತಿದ್ದವರಿಗೆ ಡಾಂಬರು ಅಂಟಿಕೊಂಡ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದೆ. ಕೊರಟಗೆರೆ ಪಟ್ಟಣದ ಕರ್ನಾಟಕ ಬ್ಯಾಂಕ್ ಮುಂಭಾಗ ಟ್ರಾಕ್ಟರ್ ನಲ್ಲಿದ್ದ ಡ್ರಮ್ ನಿಂದ ಡಾಂಬರು ಸುಡುವ ವಾಹನಕ್ಕೆ ಹಾಕಿಕೊಳ್ಳುತ್ತಿದ್ದ ವೇಳೆ ಡ್ರಮ್ ಸಿಡಿದಿದೆ.
ಡ್ರಮ್ ಸಿಡಿದ ಪರಿಣಾಮ ಹಾರಿದ ಡಾಂಬರು ಆಟೋದಲ್ಲಿ ತೆರಳುತ್ತಿದ್ದ ಗೊರವನಹಳ್ಳಿ ಮೂಲದ ಐವರಿಗೆ ಅಂಟಿಕೊಂಡಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಹೀದಾ ಜಂಜಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ.
- Advertisement -


