Saturday, June 6, 2026
Homeಕರಾವಳಿಉಡುಪಿಹೆಬ್ರಿಯಲ್ಲಿ ಆದಷ್ಟು ಶೀಘ್ರ ಇಎಸ್‌ಐ ಆಸ್ಪತ್ರೆ ಮಾಡುವುದಾಗಿ ಸಿಎಂ ಭರವಸೆ

ಹೆಬ್ರಿಯಲ್ಲಿ ಆದಷ್ಟು ಶೀಘ್ರ ಇಎಸ್‌ಐ ಆಸ್ಪತ್ರೆ ಮಾಡುವುದಾಗಿ ಸಿಎಂ ಭರವಸೆ

- Advertisement -
- Advertisement -

ಹೆಬ್ರಿ : ಜನರ ಮನೆ ಬಾಗಿಲಿಗೆ ಸರ್ಕಾರ ಸೇವೆ ನೀಡುವ ನಿಟ್ಟಿನಲ್ಲಿ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಹೆಬ್ರಿ ತಾಲೂಕಿನ ಜನರಿಗೆ ಉತ್ತಮ ಸೇವೆ ದೊರಕಿಸುವ ಕೆಲಸ ಈ ಭಾಗದ ಶಾಸಕ ಸುನಿಲ್ ಕುಮಾರ್ ಅವರಿಂದ ಆಗುತ್ತಿದೆ. ಆದಷ್ಟು ಶೀಘ್ರ ಹೆಬ್ರಿಗೆ ಇಎಸ್ ಐ ಆಸ್ಪತ್ರೆಯನ್ನು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಅವರು ಇಂದು ಹೆಬ್ರಿ ತಾಲೂಕಿನ 10 ಕೋಟಿ ವೆಚ್ಚದ ತಾಲೂಕು ಆಡಳಿತ ಕಟ್ಟಡದ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಆರ್ ಅಶೋಕ್ ನೂತನ ಹೆಬ್ರಿ ತಾಲ್ಲೂಕು ಆಡಳಿತ ಸೌಧವನ್ನು ಉದ್ಘಾಟಿಸಿದರು .

- Advertisement -

Latest News

error: Content is protected !!