Thursday, July 16, 2026
Homeಕರಾವಳಿಮಳಲಿ‌ ಮಸೀದಿ ವಿವಾದ ಕೋರ್ಟ್ ನಲ್ಲಿ ವಿಚಾರಣೆ: ಜೂನ್ 6 ಕ್ಕೆ ವಿಚಾರಣೆ ಮುಂದೂಡಿಕೆ

ಮಳಲಿ‌ ಮಸೀದಿ ವಿವಾದ ಕೋರ್ಟ್ ನಲ್ಲಿ ವಿಚಾರಣೆ: ಜೂನ್ 6 ಕ್ಕೆ ವಿಚಾರಣೆ ಮುಂದೂಡಿಕೆ

- Advertisement -
- Advertisement -

ಮಂಗಳೂರು: ಮಳಲಿ ಮಸೀದಿ ವರ್ಸಸ್ ದೇವಸ್ಥಾನ ವಿವಾದ ಕುರಿತಂತೆ ಮಂಗಳೂರು ಕೋರ್ಟ್ ನಲ್ಲಿ ನಡೆದ ಎರಡನೇ ದಿನದ ವಿಚಾರಣೆ ಮುಕ್ತಾಯಗೊಂಡಿದೆ.

ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ನಡೆದ ವಿಚಾರಣೆ ಜೂನ್ 6 ಕ್ಕೆ ‌ ಮುಂದೂಡಿಕೆಯಾಗಿದೆ.

ವಿಚಾರಣೆ ವೇಳೆ ಕೋರ್ಟ್ ಕಮಿಷನರ್ ನೇಮಿಸಿ ಮಸೀದಿ ಜಾಗದ ಸರ್ವೇ ನಡೆಸುವ ಕುರಿತಂತೆ ವಿಶ್ವ ಹಿಂದೂ ಪರಿಷತ್ ಪರ ವಕೀಲರ ಮನವಿಗೆ ಮಸೀದಿ ಸಮಿತಿ ವಕೀಲರಿಂದ ತೀವ್ರ ಆಕ್ಷೇಪವಾಗಿದೆ.

ವಿಶ್ವ ಹಿಂದೂ ಪರಿಷತ್ ಪರ ವಕೀಲರ ಮನವಿ ಪುರಸ್ಕರಿಸದಂತೆ ವಾದ ಮಂಡಿಸಿರುವ ಮಸೀದಿ ಪರ ವಕೀಲರು, ಮಳಲಿ ಮಸೀದಿಯನ್ನು ಕಾಶಿಯ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದಾರೆ.

ಮಸೀದಿ ಆಡಳಿತ ಸಮಿತಿ ಪರ ವಕೀಲ ಎಂ.ಪಿ. ಶೆಣೈ ವಾದ ಮಂಡಿಸಿದ್ದರು.‌

- Advertisement -

Latest News

error: Content is protected !!