Friday, May 17, 2024
Homeತಾಜಾ ಸುದ್ದಿಹೆತ್ತವರು ವಿರೋಧಿಸಿದರೂ ಕೇರಳದ ಸಲಿಂಗ ಜೋಡಿಯನ್ನು ಒಂದಾಗಿಸಿದ ಹೈಕೋರ್ಟ್ 

ಹೆತ್ತವರು ವಿರೋಧಿಸಿದರೂ ಕೇರಳದ ಸಲಿಂಗ ಜೋಡಿಯನ್ನು ಒಂದಾಗಿಸಿದ ಹೈಕೋರ್ಟ್ 

spot_img
- Advertisement -
- Advertisement -

ಕೇರಳ; ಹೆತ್ತವರು ವಿರೋಧಿಸಿದರೂ ಕೇರಳದ ಸಲಿಂಗ ಜೋಡಿಯನ್ನು ಕೇರಳ ಹೈಕೋರ್ಟ್ ಒಂದಾಗಿಸಿದೆ. ಆದಿಲಾ ನಸ್ರಿನ್ ಮತ್ತು ಫಾತಿಮಾ ನೂರಾ ಸಲಿಂಗ ಜೋಡಿ ಹೈಕೋರ್ಟ್ ತೀರ್ಪಿನಿಂದ ಒಂದಾಗಿದೆ.

ಅಂದ್ಹಾಗೆ ಆದಿಲಾ ನಸ್ರಿನ್ ಮತ್ತು ಫಾತಿಮಾ ನೂರಾ ಸೌದಿ ಅರೇಬಿಯಾದ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದಾಗ ಪರಸ್ಪರ ಪ್ರೀತಿ ಹುಟ್ಟಿದೆ. ಆ ಬಳಿಕ ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದಾರೆ. ಈ ವಿಚಾರ ಇಬ್ಬರ ಕುಟುಂಬದ ಗಮನಕ್ಕೆ ಬಂದು ಈ ಸಲಿಂದ ಜೋಡಿಯನ್ನು ಬೇರೆ ಬೇರೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜೋಡಿ ರಕ್ಷಣೆ ಮತ್ತು ಜೊತೆಯಾಗಿ ಬದುಕಲು ಅವಕಾಶ ಕೊಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಇದೀಗ ಇಬ್ಬರಿಗೂ ಒಟ್ಟಿಗೆ ವಾಸಿಸಲು ಅನುಮತಿ ನೀಡಿದೆ. ಎರ್ನಾಕುಲಂನ ಆಲುವಾ ಮೂಲದ ಆದಿಲಾ ನಸ್ರಿನ್ ಅವರ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ತನ್ನ ಕುಟುಂಬದಿಂದ ಬಲವಂತವಾಗಿ ಬಂಧಿಸಲ್ಪಟ್ಟಿರುವ ಫಾತಿಮಾ ನೂರಾಗೆ ಆದಿಲಾ ನಸ್ರಿನ್ ಜೊತೆ ಹೋಗಿ ವಾಸಿಸಲು ಅನುಮತಿ ನೀಡಿದೆ.

ಆದಿಲಾ ಮೇ 19 ರಂದು ಕೊಯಿಕ್ಕೋಡ್‌ನಲ್ಲಿ ನೂರಾಳನ್ನು ಭೇಟಿಯಾಗಿ ನಂತರ ಮಹಿಳಾ ರಕ್ಷಣಾ ಕೇಂದ್ರದಲ್ಲಿ ದಾಖಲಾಗಿದ್ದರು. ಇಬ್ಬರನ್ನೂ ಹುಡುಕಿಕೊಂಡು ಕುಟುಂಬಸ್ಥರು ಕೇಂದ್ರಕ್ಕೆ ಬಂದಾಗ ಪೊಲೀಸರು ಮಧ್ಯ ಪ್ರವೇಶಿಸಿದ್ದರು. ಇದಾದ ನಂತರ ಆದಿಲಾಳ ಪೋಷಕರು ಇಬ್ಬರನ್ನೂ ಆಲುವಾದಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ದಿದ್ದರು. ಆದರೆ, ತಾಮರಸ್ಸೆರಿಯ ನೂರಾ ಸಂಬಂಧಿಕರು ಅಲುವಾಕ್ಕೆ ಬಂದು ನೂರಾಳನ್ನು ಕರೆದುಕೊಂಡು ಹೋಗಿದ್ದರು.

ಆದಿಲಾ ಮೇ 30 ರಂದು ಕೇರಳ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ, ಒಟ್ಟಿಗೆ ವಾಸಿಸಲು ಅವಕಾಶ ನೀಡುವಂತೆ ನ್ಯಾಯಾಲಯದಲ್ಲಿ ಮನವಿ‌ ಮಾಡಿದ್ದಳು.‌ಇದೀಗ ಹೈಕೋರ್ಟ್ ಇಬ್ಬರು ಯುವತಿಯರಿಗೆ ಒಟ್ಟಿಗೆ ಜೀವನ‌ ನಡೆಸಲು ಅವಕಾಶ ನೀಡಿದೆ‌.

- Advertisement -
spot_img

Latest News

error: Content is protected !!