Thursday, June 4, 2026
HomeUncategorizedಹುಬ್ಬಳ್ಳಿ ಸಮೀಪ ಮಧ್ಯರಾತ್ರಿ ಲಾರಿ ಮತ್ತು ಬಸ್ ಡಿಕ್ಕಿ : 9 ಜನ ಸಾವು, 26...

ಹುಬ್ಬಳ್ಳಿ ಸಮೀಪ ಮಧ್ಯರಾತ್ರಿ ಲಾರಿ ಮತ್ತು ಬಸ್ ಡಿಕ್ಕಿ : 9 ಜನ ಸಾವು, 26 ಕ್ಕೂ ಹೆಚ್ಚು ಜನರಿಗೆ ಗಾಯ

- Advertisement -
- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ಸಮಿಪ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ 26 ಜನರಿಗೆ ಗಾಯಗಳಾಗಿದ್ದು, ಸ್ಥಳದಲ್ಲೇ 6 ಜನರು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಿಸಲಾರದೇ ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದಾರೆ.‌

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾರಿಹಾಳ ಬೈಪಾಸ್ ರಸ್ತೆಯಲ್ಲಿ ತಡ ರಾತ್ರಿ 12.40 ಗಂಟೆಗೆ ದುರಂತ ಸಂಭವಿಸಿದೆ.

ನ್ಯಾಷನಲ್ ಟ್ರಾವೆಲ್ಸ್ ಗೆ ಸೇರಿದ ಕೊಲ್ಲಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹಾಗೂ ಅಕ್ಕಿ ತುಂಬಿದ ಮಹಾರಾಷ್ಟ್ರ ನೋಂದಣಿಯ ಲಾರಿ ಮಧ್ಯೆ ಅಪಘಾತ ನಡೆದಿದೆ.

ಅಪಘಾತದಲ್ಲಿ ಲಾರಿ ಡ್ರೈವರ್, ಕ್ಲೀನರ್ ಹಾಗೂ ಬಸ್ ನ ಇಬ್ಬರು ಚಾಲಕರು ಸೇರಿ 9 ಜನ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!