Sunday, June 14, 2026
HomeUncategorizedಕಾರು ಅಡ್ಡಗಟ್ಟಿ 20 ಲಕ್ಷ ನಗದು ದೋಚಿದ ದುಷ್ಕರ್ಮಿಗಳು

ಕಾರು ಅಡ್ಡಗಟ್ಟಿ 20 ಲಕ್ಷ ನಗದು ದೋಚಿದ ದುಷ್ಕರ್ಮಿಗಳು

- Advertisement -
- Advertisement -

ಬೆಂಗಳೂರು: ಕಾರೊಂದನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಕಾರನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.


ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 20 ಲಕ್ಷ ಹಣ ಹಾಗೂ ಕಾರಿನ ಜೊತೆಯಲ್ಲೆ ಪರಾರಿಯಾಗಿದ್ದಾರೆ.


ಸ್ನೇಹಿತರಿಬ್ಬರು ಬೆಂಗಳೂರಿನ ರಾಜಾ ಮಾರ್ಕೆಟ್‌ನ ತಿರುಮಲ ಜ್ಯುವೆಲರಿ ಶಾಪ್‌ನಲ್ಲಿ ಬಂಗಾರವನ್ನ ಮಾರಾಟ ಮಾಡಿ 20 ಲಕ್ಷ ನಗದಿನೊಂದಿಗೆ ಕೇರಳಕ್ಕೆ ತೆರಳುತ್ತಿದ್ದರು. ಹೊಸ ಬೂದನೂರು ಬಳಿ ಬರುತ್ತಿದ್ದಂತೆ 6 ಮಂದಿ ದುಷ್ಕರ್ಮಿಗಳು ಕಾರನ್ನ ಅಡ್ಡಗಟ್ಟಿದ್ದಾರೆ. ಸುತ್ತಿಗೆ ಹಾಗೂ ರಾಡ್‌ನಿಂದ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಕಾರಿನ ಸಮೇತ ಎಸ್ಕೆಪ್ ಆಗಿದ್ದಾರೆ.

- Advertisement -

Latest News

error: Content is protected !!