Monday, June 8, 2026
Homeತಾಜಾ ಸುದ್ದಿಎಷ್ಟು ಕುಡಿದ್ರೂ ಕಿಕ್ ಬರ್ತಿಲ್ಲ ಸಾರ್ : ಗೃಹಸಚಿವರಿಗೆ ಪತ್ರ ಬರೆದು ಅಳಲು ತೋಡಿಕೊಂಡ...

ಎಷ್ಟು ಕುಡಿದ್ರೂ ಕಿಕ್ ಬರ್ತಿಲ್ಲ ಸಾರ್ : ಗೃಹಸಚಿವರಿಗೆ ಪತ್ರ ಬರೆದು ಅಳಲು ತೋಡಿಕೊಂಡ ಕುಡುಕ

- Advertisement -
- Advertisement -

ಮಧ್ಯಪ್ರದೇಶ; ಎಷ್ಟೇ ಕುಡಿದ್ರೂ ಸರ್ ನಶೆ ಏರುತ್ತಿಲ್ಲ ಎಂದು ಗೃಹಸಚಿವರಿಗೆ ಕುಡುಕನೋರ್ವ ಪತ್ರ ಬರೆದಿರುವ ಘಟನೆ ಮಧ್ಯಪ್ರದೇಶದ ಉಜ್ಜೆಯಿನಿಯಲ್ಲಿ‌ ನಡೆದಿದೆ‌. ಲೋಕೇಂದ್ಪ ಪತ್ರ ಬರೆದಿರುವ ಕುಡುಕ.

ಪತ್ರದಲ್ಲಿ ಲೋಕೇಂದ್ರ, ಗುತ್ತಿಗೆದಾರರು ಮದ್ಯಕ್ಕೆ ನೀರು ಬೆರೆಸುತ್ತಿದ್ದಾರೆ ಇದರಿಂದ ಕುಡಿತದ ಅಮಲು ಬರುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.ಉಜ್ಜಯಿನಿಯ ಬಹದ್ದೂರ್ ಗಂಜ್ ಆರ್ಯ ಸಮಾಜ ಮಾರ್ಗದಲ್ಲಿ ನಾನು ನೆಲೆಸಿದ್ದು, ಕಳೆದ 20 ವರ್ಷಗಳಿಂದ ಮದ್ಯಪಾನ ಮಾಡುತ್ತಿದ್ದೇನೆ. ಏ. 12 ರಂದು ಕ್ಷೀರಸಾಗರ ಪ್ರದೇಶದಲ್ಲಿ ಇರುವ ಮದ್ಯದಂಗಡಿಯಿಂದ ನಾಲ್ಕು ಕ್ವಾರ್ಟರ್ ದೇಶೀಯ ಮದ್ಯವನ್ನು ಖರೀದಿಸಿದ್ದೆ‌. ಎರಡು ಕ್ವಾರ್ಟರ್ ಕುಡಿದು ನೋಡಿದಾಗ ನಶೆ ಏರಲಿಲ್ಲ.ಬಾಟಲಿ ಪೂರ್ತಿ ಕುಡಿದರೂ ಕಿಕ್ ಬಂದಿಲ್ಲ. ಇದರಲ್ಲಿ ಕಲಬೆರಕೆ ಇರುವ ಶಂಕೆ ವ್ಯಕ್ತವಾಗಿದೆ ಎಂದು‌ ಪತ್ರದಲ್ಲಿ ಹೇಳಿದ್ದಾನೆ.

ತಮ್ಮ ಬೇಡಿಕೆಗೆ ಸ್ಪಂದಿಸಿ ತನಿಖೆ ನಡೆಸಿ ಇಲ್ಲದಿದ್ದರೆ ಗ್ರಾಹಕರ ವೇದಿಕೆಯಲ್ಲಿ ದೂರು ನೀಡುವುದಾಗಿ ಲೋಕೇಂದ್ರ ಹೇಳಿದ್ದಾರೆ.

- Advertisement -

Latest News

error: Content is protected !!