Saturday, June 6, 2026
Homeಕರಾವಳಿಉಳ್ಳಾಲ ಚೂರಿ ಇರಿತ ಪ್ರಕರಣ: ಆರೋಪಿ ಟ್ಯಾಂಕರ್ ಚಾಲಕನ ಬಂಧನ

ಉಳ್ಳಾಲ ಚೂರಿ ಇರಿತ ಪ್ರಕರಣ: ಆರೋಪಿ ಟ್ಯಾಂಕರ್ ಚಾಲಕನ ಬಂಧನ

- Advertisement -
- Advertisement -

ಉಳ್ಳಾಲ: ಕುಡಿಯುವ ನೀರು ಸರಬರಾಜು ಮಾಡುವ ವಿಚಾರದಲ್ಲಿ ರಿಝ್ವಾನ್ ಎಂಬವರಿಗೆ ಹಲ್ಲೆ ಮಾಡಿ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟ್ಯಾಂಕರ್ ಚಾಲಕ ಮೇಲಂಗಡಿ ನಿವಾಸಿ ಖಲೀಲ್ ಎಂಬಾತನನ್ನು ಉಳ್ಳಾಲ ಇನ್ಸ್‌ ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಬಂಧಿಸಿದೆ.

ಏಪ್ರಿಲ್ 29ರಂದು ನಗರ ಸಭೆಯ ನೀರು ಸರಬರಾಜು ಬಗ್ಗೆ ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ಅವರಿಗೆ ಖಲೀಲ್ ಚೂರಿಯಿಂದ ಇರಿದು ಪರಾರಿಯಾಗಿದ್ದು, ಈ ಬಗ್ಗೆ ರಿಝ್ವಾನ್ ಸ್ನೇಹಿತ ಸೈಫುದ್ದೀನ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮೆರೆಸಿಕೊಂಡಿದ್ದ ಟ್ಯಾಂಕರ್ ಚಾಲಕ ಖಲೀಲ್ ನನ್ನು ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.

- Advertisement -

Latest News

error: Content is protected !!