Sunday, June 7, 2026
HomeUncategorizedರಾಜ್ಯದಲ್ಲಿ ಬುಲ್ಡೋಜರ್ ವ್ಯವಸ್ಥೆ ಬರಬೇಕು ಎಂದು ಬಹುಜನರ ಅಭಿಪ್ರಾಯವಾದರೆ ಸರ್ಕಾರದಿಂದ ಮನ್ನಣೆ: ಸಚಿವ ಸುನೀಲ್ ಕುಮಾರ್...

ರಾಜ್ಯದಲ್ಲಿ ಬುಲ್ಡೋಜರ್ ವ್ಯವಸ್ಥೆ ಬರಬೇಕು ಎಂದು ಬಹುಜನರ ಅಭಿಪ್ರಾಯವಾದರೆ ಸರ್ಕಾರದಿಂದ ಮನ್ನಣೆ: ಸಚಿವ ಸುನೀಲ್ ಕುಮಾರ್ ಹೇಳಿಕೆ

- Advertisement -
- Advertisement -

ಬೆಂಗಳೂರು: ಬುಲ್ಡೋಜರ್ ವ್ಯವಸ್ಥೆ ರಾಜ್ಯದಲ್ಲಿಯೂ ಬರಬೇಕು ಎನ್ನುವುದು ಬಹುಜನರ ಅಭಿಪ್ರಾಯವಾದರೆ ಸರ್ಕಾರ ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಸುನೀಲ್ ಕುಮಾರ್, ನಮ್ಮ ಸರ್ಕಾರ ಹೆಚ್ಚು ಜನಾಭಿಪ್ರಾಯಕ್ಕೆ ಬೆಲೆ ಕೊಡುತ್ತದೆ, ಜನಾಭಿಪ್ರಾಯ ದೊಡ್ಡ ಪ್ರಮಾಣದಲ್ಲಿ ಹೇಗೆ ನಿರ್ಧಾರ ಆಗುತ್ತದೆ ಎಂದು ನೋಡೋಣ, ಆ ಜನಾಭಿಪ್ರಾಯಕ್ಕೆ ತಲೆಬಾಗುವಂತಹ ಸರ್ಕಾರ ನಮ್ಮದು ಎಂದಿದ್ದಾರೆ. ‌

ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಕಿಡಿಗೇಡಿಗಳ ಮನೆ ಮೇಲೆ ಬುಲ್ಡೋಜರ್ ನುಗ್ಗಿಸುವ ನಿರ್ಧಾರದಂತೆ ರಾಜ್ಯದಲ್ಲೂ ಅನುಸರಿಸಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಒತ್ತಾಯಿಸಿದ್ದರು.

ಇದೇ ವೇಳೆ ಮಂದಿರಗಳು ಪ್ರಾರ್ಥನೆಗೆ ಸೀಮಿತ ಆದರೆ ಒಳ್ಳೆಯದು. ಪ್ರಚೋದನೆ ಕೊಡುವ ಕೇಂದ್ರಗಳು ಅವು ಆಗಬಾರದು. ಅವುಗಳ ಮೇಲೆ ಅನುಮಾನ ಮೂಡುವಂತೆ ಮಾಡಬಾರದು. ಅದನ್ನು ಆ ಸಮುದಾಯದ ಮುಖಂಡರು ಮೌಲ್ವಿಗಳು ಮಾಡಬೇಕು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

- Advertisement -

Latest News

error: Content is protected !!