Friday, April 19, 2024
Homeಕರಾವಳಿಕಡಬದ ಕೊಯಿಲ ಸರ್ಕಾರಿ ಶಾಲೆಯಲ್ಲಿ ಹೀಗೊಂದು ವಿನೂತನ ಪ್ರಯೋಗ: ದಾನಿಗಳ ನೆರವಿನಿಂದ  ನಿರ್ಮಾಣವಾಗಿದೆ ಅಡಿಕೆ ತೋಟ

ಕಡಬದ ಕೊಯಿಲ ಸರ್ಕಾರಿ ಶಾಲೆಯಲ್ಲಿ ಹೀಗೊಂದು ವಿನೂತನ ಪ್ರಯೋಗ: ದಾನಿಗಳ ನೆರವಿನಿಂದ  ನಿರ್ಮಾಣವಾಗಿದೆ ಅಡಿಕೆ ತೋಟ

spot_img
- Advertisement -
- Advertisement -

ಕಡಬ: ಊರವರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಯೊಂದರಲ್ಲಿ ಯಾವ ರೀತಿ ಬದಲಾವಣೆ ತರಬಹುದು ಎಂಬುವುದಕ್ಕೆ ಬೆಸ್ಟ್ ಎಕ್ಸಾಂಪಲ್ ಕಡಬ ತಾಲೂಕಿನ ಅಲಂಕಾರಿನ ಕೊಯಿಲ  ಕೆ ಸಿ ಫಾರ್ಮ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ.

ಈ ಶಾಲೆಯ   ಶಾಲಾಭಿವೃದ್ದಿ ಸಮಿತಿ, ಶಿಕ್ಷಕರು ,  ಶಿಕ್ಷಣ ಪ್ರೇಮಿಗಳು ಸಹಕಾರದೊಂದಿಗೆ ಸರ್ಕಾರಿ ಶಾಲೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಶಿ ಪುತ್ಯೆ ಮುಂದಾಳತ್ವದಲ್ಲಿ  ಶಾಲೆಯಲ್ಲಿ ಅಡಿಕೆ ತೋಟ ನಿರ್ಮಿಸಲಾಗಿದೆ.  ಶಾಲಾ  ಕೊಠಡಿಗಳ ಹಿಂಭಾಗದಲ್ಲಿರುವ  ಖಾಲಿ ಜಾಗದಲ್ಲಿ ಸುಮಾರು 450 ಅಡಿಕೆ ಸಸಿ ನಾಟಿ ಮಾಡಲಾಗಿದೆ.

ಆರಂಭದಲ್ಲಿ ನೆಲ ಸಮತಟ್ಟುಗೊಳಿಸಿ ಬಳಿಕ ನರೇಗಾ ಯೋಜನೆಯಡಿ ಹೊಂಡ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಶಾಲಾ ಆವರಣದ ಸುತ್ತ ಸುಮಾರು 30 ತೆಂಗಿನ ಸಸಿ ನೆಡುವ ಸಲುವಾಗಿ ಹೊಂಡ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆಲ್ಲ ಶಾಲೆಯ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತದೆ. ನೀರಾವರಿಗಾಗಿ ಪೈಪುಗಳನ್ನು ಅಳವಡಿಸಲಾಗಿದೆ. ಶಾಲಾ ಅವರಣವನ್ನು ಭದ್ರಪಡಿಸಲಾಗಿದೆ.

ಗ್ರಾಮದ ಪ್ರಗತಿಪರ ಕೃಷಿಕ ರಾಮ ನಾಯ್ಕ ಏಣಿತ್ತಡ್ಕ ತನ್ನ ನರ್ಸರಿಯಿಂದ ಮಂಗಳ ತಳಿಯ ಸುಮಾರು ೫೦೦ ಅಡಿಕೆ ಸಸಿಗಳನ್ನು ಉಚಿತವಾಗಿ ನೀಡಿದ್ದಾರೆ. ಧಾರ್ಮಿಕ ಮುಂದಾಳು ಲಿಂಗಪ್ಪ ಗೌಡ ಕಡೆಂಬ್ಯಾಲು ಧನ ಸಹಾಯದೊಂದಿಗೆ ರಸಗೊಬ್ಬರ ಉಚಿತವಾಗಿ ನೀಡಿದ್ದಾರೆ. ಹಿರಿಯ ವಿದ್ಯಾರ್ಥಿ , ಉದ್ಯಮಿ ದಾಮೋದರ ಪುತ್ಯೆ ವಿದ್ಯುತ್ ಪಂಪು ಶೆಡ್ ನಿರ್ಮಾಣದ ವೆಚ್ಚ ಭರಿಸಿದ್ದಾರೆ. , ಪ್ರಗತಿಪರ ಕೃಷಿಕ ಉದಯ ಭಟ್ ಪೂರಿಂಗ , ಮುಖ್ಯ ಶಿಕ್ಷಕಿ ರೇಖಾ ಹೆಚ್ಚಿನ ಧನ ಸಹಾಯ ನೀಡಿ ಪ್ರೋತ್ಸಾಹಿಸಿದ್ದಾರೆ. ಇನ್ನುಳಿದಂತೆ ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಕೈಲಾದಷ್ಟು ಧನ ಸಹಾಯ ನೀಡಿದ್ದಾರೆ. ಊರವರು   , ಶಾಲಾಭಿವೃದ್ದಿ ಸಮಿತಿಯ ಸದಸ್ಯರು ಶ್ರಮ ಸೇವೆಯಲ್ಲಿ ಪಾಲ್ಗೊಂಡು ತಮ್ಮ ಸೇವೆ ಸಲ್ಲಿಸಿ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಇನ್ನೂ ಹಲವರು ಮಂದಿ  ಧನ ಸಹಾಯ ನೀಡುವ ಭರವಸೆ ನೀಡಿದ್ದಾರೆ .

ನಾಟಿ ಮಾಡಲಾದ ಅಡಿಕೆ ಕೃಷಿಯನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಳ್ಳುವ ಜವಬ್ದಾರಿಯನ್ನು ಶಾಲಾಭಿವೃದ್ದಿ ಸಮಿತಿ ವಹಿಸಿಕೊಳ್ಳಲಿದೆ. ಇದರಿಂದ ಬರುವ ಆದಾಯವನ್ನು ಶಾಲೆಯ ಅಭಿವೃದ್ದಿಗೆ ಬಳಸಿಕೊಳ್ಳಲಾಗುತ್ತದೆ. ಮುಖ್ಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರ ಸಂಬಳವನ್ನು ಇದರ ಅದಾಯದಿಂದ ನಿಭಾಯಿಸುವ ಗುರಿ ಇಟ್ಟುಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!